ಜಿಲ್ಲೆ

ಈಜಲು ಹೋದ ಯುವಕ ಕೆರೆಪಾಲು

Kalaburagi

ಆಳಂದ: ಧಂಗಾಪುರ ಗ್ರಾಮದ ಬುರ್ಲಿದರಿ ಕೆರೆಯಲ್ಲಿ ಮಂಗಳವಾರ ಬೆಳಗ್ಗೆ ಈಜಲು ಹೋಗಿದ್ದ ಮೂವರು ಯುವಕರಲ್ಲಿ ಒಬ್ಬ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಇಬ್ಬರು ಈಜುತ್ತ ಮುಂದೆ ಸಾಗಿದರೆ, ಶಿವಶಂಕರ ದೊಡ್ಮನಿ ಈಜುವಾಗ ಕೈಯಲ್ಲಿನ ಖಡೆಗೆ ಮುಳ್ಳಿನ ಕಂಟಿ ಸಿಲುಕಿ ಮೇಲೆ ಬರಲಾಗದೆ ಕೊನೆಯುಸಿರೆಳೆದಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ, ಮೀನುಗಾರರು ಮಧ್ಯಾಹ್ನ 2ರವರೆಗೆ ಹುಡುಕಿದರೂ ಶವ ಪತ್ತೆ ಆಗಿಲ್ಲ. ಆದರೆ ಆಳಂದದ ಸೂರ್ಯಕಾಂತ ಅಷ್ಠಗಿ ಎಂಬುವರು ಕೆರೆಗಿಳಿದು 9 ಸೆಕೆಂಡ್ನಲ್ಲಿ ಶವವನ್ನು ಮೇಲೆ ತಂದು ಸಾಹಸ ಮೆರೆದಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು.
ಕಂದಾಯ ನಿರೀಕ್ಷಕ ಅನೀಲಕುಮಾರ, ಗ್ರಾಮ ಲೆಕ್ಕಿಗ ಪ್ರಭುಲಿಂಗ ತಟ್ಟಿ, ಅಗ್ನಿಶಾಮಕ ದಳದ ಎಎಸ್ಐ ಸೈಯದ್ ಪಾಶಾ, ಸಿಬ್ಬಂದಿ ಗಿರೀಶ, ಹಣಮಂತ , ಪ್ರಕಾಶ, ಸೋಮನಾಥ ಇತರರಿದ್ದರು. ನಿಂಬಗರ್ಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಿನಲ್ಲಿ ಅಷ್ಠಗಿ ಎಕ್ಸಪರ್ಟ್​
ಆಳಂದ ತಾಲೂಕಿನ ವಿವಿಧೆಡೆ ನೀರಲ್ಲಿ ಮುಳುಗಿ ಮೃತಪಟ್ಟಿರುವ 8-10 ಜನರ ಶವಗಳನ್ನು ಹೊರತೆಗೆದಿರುವ ಆಳಂದ ಶರಣ ನಗರದ ಯುವಕ ಸೂರ್ಯಕಾಂತ ಅಷ್ಠಗಿ ಈಜಿನಲ್ಲಿ ಪರಿಣತಿ ಹೊಂದಿದ್ದಾನೆ. ಶಿವಶಂಕರ ದೊಡ್ಮನಿ ಪ್ರಕರಣದಲ್ಲಿ ಅಗ್ನಿಶಾಮಕ ದಳದವರು ಮತ್ತು ಮೀನುಗಾರರು ಸುಮಾರು ಹೊತ್ತು ಹುಡುಕಾಡಿದರೂ ಶವ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಯಾವಾಗ ಅಷ್ಠಗಿ ನೀರಿಗೆ ಧುಮುಕಿದನೋ ನೋಡನೋಡುತ್ತಿದ್ದಂತೆ ಮುಳ್ಳಿನ ಕಂಟಿಯಲ್ಲಿ ಸಿಲುಕಿದ್ದ ಶವವನ್ನು ಮೇಲಕ್ಕೆತ್ತುವ ಮೂಲಕ ಸಾಹಸ ಜತೆಗೆ ಪರಿಣತಿಯನ್ನು ತೋರಿಸಿಕೊಟ್ಟಿದ್ದಾನೆ. ಇಂಥವರನ್ನು ಸಕರ್ಾರ, ಸಂಘ-ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ.