ಜಿಲ್ಲೆ

ಈಜಲು ಹೋಗಿದ್ದ ಯುವಕ ಸಾವು

ರಮೇಶ ಮೇಳಕುಂದಾ

ಕಲಬುರಗಿ: ಸ್ನೇಹಿತರ ಜೊತೆ ಬಾವಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ ತಾವರಗೇರಾದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಅಬ್ದುಲ್ ಖಾದರ್ (೨೫) ಮೃತ ಯುವಕ. ಈಜು ಬರದ ಈತ ಡಬ್ಬಿ ಕಟ್ಟಿಕೊಂಡು ಈಜಾಡಲು ಹೋಗಿದ್ದ. ಡಬ್ಬಿ ಕಳಚಿದ್ದು ನೀರಿನಲ್ಲಿ ಮುಳುಗಿದ್ದಾನೆ. ಸಂಜೆಯಿAದ ಅಗ್ನಿ ಶಾಮಕದಳ ಸಿಬ್ಬಂದಿ ಯುವಕನ ಪತ್ತೆಗೆ ಬಾವಿಯಲ್ಲಿ ಶೋಧಕಾರ್ಯ ನಡೆಸಿದರು. ಬುಧವಾರ ಶವ ಪತ್ತೆಯಾಗಿದೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.