ಬಾಗಲಕೋಟೆ: ಯುಗಾದಿ ಪಾಡ್ಯದ ಸಂಭ್ರಮದ ನಡುವೆಯೇ ತಾಲೂಕಿನ ಸೀತಿಮನಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಅವಘಡವೊಂದು ಸಂಭವಿಸಿದೆ. ನದಿಯಲ್ಲಿ ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲಾಗಿದ್ದು, ಇವರಲ್ಲಿ ಓರ್ವ ಬಾಲಕ ಶವ ಪತ್ತೆ ಆಗಿದ್ದು, ಇನ್ನಿಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ.
ಭಾನುವಾರ ನದಿಯಲ್ಲಿ ಈಜಲು ಹೋಗಿದ್ದ ತಾಲೂಕಿನ ಇಲ್ಯಾಳ ಗ್ರಾಮದ ಸೋಮಶೇಖರ ದೇವರಮನಿ(೧೫), ಪರನಗೌಡ ಬೀಳಗಿ(೧೭) ಹಾಗೂ ಮಲ್ಲಪ್ಪ ಬಗಲಿ(೧೬) ನೀರು ಪಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬಾಲಕರ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಮೂವರ ಪೈಕಿ ಬಾಲಕ ಸೋಮಶೇಖರ ಶವ ಪತ್ತೆಯಾಗಿದೆ. ಆದರೆ, ಇನ್ನಿಬ್ಬರು ಬಾಲಕರ ಸುಳಿವು ಸಿಕ್ಕಿಲ್ಲ.
ಭಾನುವಾರ ಮಧ್ಯಾಹ್ನದಿಂದಲೇ ಅಗ್ನಿಶಾಮಕ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದು, ಸೋಮವಾರ ಸಂಜೆ ವರೆಗೂ ಬಾಲಕರು ಇನ್ನೂ ಪತ್ತೆ ಆಗಿಲ್ಲ. ಸ್ಥಳದಲ್ಲಿ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು, ಹಿರಿಯ ಅಽಕಾರಿಗಳು ಬೀಡು ಬಿಟ್ಟಿದ್ದಾರೆ.