ಜಿಲ್ಲೆ

ಈ ವರ್ಷ ಅನುದಾನ ಸಿಗುವುದು ಕಷ್ಟ


ಯಾದಗಿರಿ: ಚುನಾವಣೆ ವೇಳೆ ರಾಜ್ಯದ ಜನತೆಗೆ ನಾವು ನೀಡಿದ್ದ ಐದು ಗ್ಯಾಂರಂಟಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕಾಗಿದ್ದರಿಂದ ಈ ವರ್ಷ ಕ್ಷೇತ್ರಕ್ಕೆ ಸಕರ್ಾರದಿಂದ ಅನುದಾನ ಸಿಗುವುದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ಶಹಾಪುರದ ನಗರದ ಫಕೀರೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಯುವ ಘಟಕದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಪ್ರಾಮಾಣಿಕ ಪ್ರಯತ್ನ ಮಾಡಿ ಅನುದಾನ ತರಲು ಪ್ರಯತ್ನಿಸುತ್ತೇನೆ. ವೀರಶೈವ ಸಮುದಾಯಕ್ಕೆ ಕಲ್ಯಾಣ ಮಂಟಪ ನಿಮರ್ಾಣದಕ್ಕಾಗಿ ನಿವೇಶನ ಕಲ್ಪಿಸಲು ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ, ನಿವೇಶನ ಖರೀದಿಸಲು ಶೇ.50 ರಷ್ಟು ರಿಯಾಯತಿ ನೀಡುವಂತೆ ಸಕರ್ಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಎಂದರು.
ಈ ಪ್ರಯತ್ನ ಸಾಧ್ಯವಾಗದಿದ್ದಲ್ಲಿ ಸಮುದಾಯದವರೇ ಖರೀದಿಸಲು ಸಹಕಾರ ನೀಡಬೇಕು. ಅದರಂತೆ ರುದ್ರಭೂಮಿ ಕೊರತೆ ನೀಗಿಸಲು ದಿಗ್ಗಿ ರಸ್ತೆಯಲ್ಲಿ ಒಂದಿಷ್ಟು ಎಕರೆ ಭೂಮಿ ಲಭ್ಯವಿದೆ ಎಂದು ತಿಳಿದು ಬಂದಿದೆ. ಅದನ್ನು ಸಮಾಜಕ್ಕೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ಕೈಗಾರಿಕೆ ಕ್ಲಸ್ಟರ್ ಸ್ಥಾಪಿಸುವುದರೊಂದಿಗೆ ಸಣ್ಣ ಕೈಗಾರಿಕೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ನಗರದಲ್ಲಿ ಈಗಾಘಲೇ 70 ಕೋಟಿ ರೂ.ವೆಚ್ಛದಲ್ಲಿ ಶಾಶ್ವತ ಕುಡುಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಅಲ್ಲದೆ ದಿನದ 24 ಗಂಟೆ ನೀರು ಸಿಗಲು 120 ಕೋಟಿ ರೂ.ಅನುದಾನ ಬೇಕಿದ್ದು, ನಮ್ಮ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಟೆಂಡರ್ ಕರೆಯಲಾಗುವುದು ಎಂದರು.
ಗುಮಳಾಪುರ ಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು, ಶ್ರೀ ಗುರುಪಾದ ಸ್ವಾಮಿಗಳು, ಶ್ರೀ ಬಸವಯ್ಯ ಶರಣರು ಸಾನಿಧ್ಯ ವಹಿಸಿದ್ದರು. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರ, ಮುಖಂಡರಾದ ಚಂದ್ರಶೇಖರ ಸಾಹು ಆರಬೋಳ, ಸಿದ್ದಲಿಂಗಣ್ಣ ಆನೆಗುಂದಿ, ಸುರೇಂದ್ರ ಪಾಟೀಲ ಮಡ್ನಾಳ, ಶಂಭುಲಿಂಗ ಗೋಗಿ, ಮಲ್ಲಿಕಾಜರ್ುನ ಜಾಕಾ, ಸುನೀಲ ಶಿಣರ್ಿ ಇದ್ದರು.