ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ಜಿಲ್ಲೆ ಶೇ.90ಕ್ಕೂ ಹೆಚ್ಚು ಪಾರದರ್ಶಕ ಫಲಿತಾಂಶ ಸಾಧಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಶಿಕ್ಷಣ ಇ ಲಾಖೆ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದರು.
ನಗರದ ಸೆಂಟ್‌ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆ ದ ಶೈಕ್ಷಣಿಕ ಸಾಲಿನ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.72.85 ಬಂದಿದ್ದಕ್ಕೆ ಕಳವಳ ವ್ಯಕ್ತಪಡಿಸಿದರು. ಈ ವರ್ಷ ಶೇ.90ಕ್ಕೂ ಅಧಿಕ ಫಲಿತಾಂಶ ಬರಲೇ ಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗಬೇಕು, ಶಾಲೆಯಿಂದ ಹೊರಗೊಳಿದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತ ರುವಂಥ ಕೆಲಸವಾಗಬೇಕು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಶಿಕ್ಷಣ ಇಲಾಖೆ ಕಚೇರಿಗಳಲ್ಲಿ ಅಧಿಕಾರಿ,ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿ ಸಬೇಕೆಂದು ಎಚ್ಚರಿಸಿದರು.
ಚಿತ್ರದುರ್ಗ ತಹಸೀಲ್ದಾರ್ ಡಾ.ನಾಗವೇಣಿ,ಡಿಡಿಪಿಐ ಎಂ.ಆರ್.ಮಂಜುನಾಥ್,ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್,ಶಿಕ್ಷಣಾಧಿಕಾರಿ ಗಳಾದ ಸಿದ್ದಪ್ಪ,ತಿಪ್ಪೇಸ್ವಾಮಿ,ಬಿಇಒಗಳಾದ ಎಸ್.ನಾಗಭೂಷಣ್,ಶ್ರೀನಿವಾಸ್,ಸಿ.ಎ.ತಿಪ್ಪೇಸ್ವಾಮಿ, ಕೆ.ಎಸ್.ಸುರೇಶ್,ನಿರ್ಮಲಾದೇವಿ ಮತ್ತಿತರ ಅಧಿಕಾರಿಗಳಿದ್ದರು.