ಜಿಲ್ಲೆ

ಈ ಬಾರಿ ಮಳೆ-ಬೆಳೆ ಉತ್ತಮ

ಕಂಪ್ಲಿ: ಜವುಕು ಗ್ರಾಮದ ಆರಾಧ್ಯದೈವ ಶ್ರೀಆಂಜನೇಯಸ್ವಾಮಿ ರಥೋತ್ಸವ ಸೋಮವಾರ ಶ್ರದ್ಧಾ-ಭಕ್ತಿಗಳಿಂದ ನಡೆಯಿತು.

ರಥೋತ್ಸವ ನಿಮಿತ್ತ ಬ್ರಾಹ್ಮಿ ಮಹೂರ್ತದಲ್ಲಿ ಅಗ್ನಿ ಹಾಯುವುದು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪೂಜಾರಿ ಸಣ್ಣ ಬಸವರಾಜ ಅಗ್ನಿತುಳಿದು, ಈ ಬಾರಿ ಮಳೆ-ಬೆಳೆ ಚೆನ್ನಾಗಿರುತ್ತದೆ, ರೋಗ-ರುಜಿನ ಇಲ್ಲದೆ ಜನ ಸುಖವಾಗಿರುತ್ತಾರೆ ಎಂದು ಹೇಳಿಕೆ ನೀಡಿದರು.

ಐದು ಅಮಾವಾಸ್ಯೆ ಗ್ರಾಮ ದೇವತೆ ಸುಂಕ್ಲಮ್ಮ, ಮಾರೆಮ್ಮದೇವಿಗೆ ಗ್ರಾಮಸ್ಥರು ಎಡೆ ನೀಡಬೇಕೆಂದು ಸೂಚಿಸಿದರು. ರಥೋತ್ಸವದಲ್ಲಿ ಶಾಸಕ ಜೆ.ಎನ್.ಗಣೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್ ಪಾಲ್ಗೊಂಡಿದ್ದರು.