ಚಿತ್ರದುರ್ಗ: ಬಾಹ್ಯಕಾಶ ನೌಕೆಗಳ ಪರಸ್ಪರ ಜೋಡಣೆ(ಡಾಕಿಂಗ್)ಯಲ್ಲಿ ಯಶಸ್ವಿಯಾಗಿರುವ ಇಸ್ರೋ ವಿಜ್ಞಾನಿಗಳ ಸಾಧನೆಯಿಂದಾಗಿ ಇಡೀ ಜ ಗತ್ತು ಇಂದು ಭಾರತದೆಡೆ ನೋಡುವಂತಾಗಿರುವುದಾಗಿ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ರಾಘವೇಂದ್ರ ನರ್ಸಿಂ ಗ್ ಕಾಲೇಜಿನಲ್ಲಿ ಶುಕ್ರವಾರ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು,ಒಂದು ಕಾಲದಲ್ಲಿ ಬಡತನದಲ್ಲಿದ್ದ ನಮ್ಮ ದೇಶದಲ್ಲೀಗ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿದ್ದು,ಭಾರತವನ್ನು ವಿಶ್ವಗುರುವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಗು ರಿ ಇದಕ್ಕೆ ಕಾರಣವಾಗಿದೆ.
ಇಸ್ರೋ ಸಾಧನೆ ಹೆಮ್ಮೆ ಪಡುವ ಸಂಗತಿ. ನಮ್ಮ ವಿಜ್ಞಾನಿಗಳು,ವೈದ್ಯರು,ವೈದ್ಯ ಸಿಬ್ಬಂದಿಗೆ ದೇಶ-ವಿದೇಶಗಳಲ್ಲಿ ಬೇಡಿಕೆಯಿದೆ. ಪ್ಯಾರಾ ಮೆಡಿಕಲ್,ನರ್ಸಿಂಗ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ನಮ್ಮ ದೇಶದ ಪ್ರತಿಭಾವಂತ ಮಕ್ಕಳು ಅತ್ಯಂತ ಚುರುಕಾಗಿದ್ದು,ಅವರಿಗೆ ಶಿಕ್ಷಣ ಮ ತ್ತು ವೃತ್ತಿಯಲ್ಲಿ ಉತ್ತಮ ಅವಕಾಶಗಳನ್ನು ಒದಗಿಸಬೇಕಿದೆ. ವಿದ್ಯಾರ್ಥಿಗಳು ದೇಶಾಭಿಮಾನದೊಂದಿಗೆ ಶಿಕ್ಷಣದ ಕಡೆ ಗಮನ ಹರಿಸಬೇಕೆ ಂದರು.
ವಿದ್ಯಾಲಯದ ಕಾರ‌್ಯದರ್ಶಿ ಶ್ರೀನಿವಾಸ್ ಮಾತನಾಡುತ್ತ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಅಂಕಗಳಿಗೂ ಮೌಲ್ಯವಿದೆ ಎಂದರು. ನಿವೃತ್ತ ವಲಯ ಅರಣ್ಯಾಧಿಕಾರಿ ಎಚ್.ರಾಮಮೂರ್ತಿ ಮಾತನಾಡಿ,ಪದವಿ ಬಳಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಪ್ರಾಂಶುಪಾಲಜಗದೀಶ್, ಶಂಕರಪ್ಪ, ಪ್ರೇಮ, ಡೇವಿಡ್,ಇಮ್ರಾನ್ ಮತ್ತಿತರರು ಇದ್ದರು.