ಬೈಲಹೊಂಗಲದಲ್ಲಿ ಬಸವಜಯ ಮತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪಂಚಮಸಾಲಿ ಸಭೆ ಜರುಗಿತು. ಮಹೇಶ ಹರಕುಣಿ, ಶಂಕರ ಮಾಡಲಗಿ, ರುದ್ರಪ್ಪ ಹೊಸಮನಿ, ಮಹಾಬಳೇಶ್ವರ ಬೋಳನ್ನವರ ಇತರರು ಇದ್ದರು. 
ಜಿಲ್ಲೆ

ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ

ರಾಘವೇಂದ್ರಗೌಡ ಭೀ ಪಾಟೀಲ್

ಬೈಲಹೊಂಗಲ: ರಾಜ್ಯ ಸರ್ಕಾರ 2ಎ ಮೀಸಲಾತಿ ನೀಡಬೇಕು. ಎಲ್ಲ ಲಿಂಗಾಯತ ಉಪಸಮುದಾಯಕ್ಕೆ ಒಬಿಸಿ ಮೀಸಲಾತಿಗೆ ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡಬೇಕೆಂದು ಒತ್ತಾಯಿಸಿ ಸೆ.10ರಂದು ನಿಪ್ಪಾಣಿಯಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಬಳಿಕ ರಾಷ್ಟ್ರೀಯ ಹೆದ್ದಾರಿಗೆ ಪಾದಯಾತ್ರೆ ಮೂಲಕ ತೆರಳಿ ಇಷ್ಟಲಿಂಗ ಪೂಜೆ ಮಾಡಲಾಗುವುದು ಎಂದು ಕೂಡಲಸಂಗಮದ ಬಸವಜಯಮತ್ಯುಂಜಯ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮುದಾಯದವರು ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಇದಕ್ಕೂ ಮೊದಲು ಸ್ವಾತಂತ್ರೃ ಸಂಗ್ರಾಮದ ಪ್ರಥಮ ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚನ್ನಮ್ಮ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು.

ಮಹೇಶ ಹರಕುಣಿ, ಶಂಕರ ಮಾಡಲಗಿ, ದಿಗ್ವಿಜಯ ಸಿದ್ನಾಳ, ಮಹಾಂತೇಶ ತುರಮರಿ, ರುದ್ರಪ್ಪ ಹೊಸಮನಿ, ಮಹಾಬಳೇಶ್ವರ ಬೋಳನ್ನವರ, ಈಶ್ವರ ಕೊಪ್ಪದ, ಬಿ.ಎಂ.ಚಿಕ್ಕನಗೌಡರ, ಎಂ.ವೈ. ಸೋಮನ್ನವರ, ಎಂ.ಆರ್. ಮೆಳವಂಕಿ, ಬಿ.ಬಿ.ಹುಣಶಿಕಟ್ಟಿ, ಶಿವಪುತ್ರಪ್ಪ ತಟವಾಟಿ, ಶ್ರೀಶೈಲ ಯಡಳ್ಳಿ, ಶ್ರೀಕಾಂತ ಮಾಳಕನ್ನವರ, ಬಿ.ಬಿ. ಸಂಗನಗೌಡರ, ಅಶ್ವಿನ ಇಂಗಳಗಿ, ಉಳವಪ್ಪ ಶೆಟಗಾರ, ಸುನೀಲ ಈಟಿ, ರಮೇಶ ಯಲ್ಲಪ್ಪಗೌಡರ, ಬಸನಿಂಗ ಹಣಸಿ ಇತರರು ಇದ್ದರು.