ಜಿಲ್ಲೆ

ಇಳೆಗೆ ತಂಪೆರೆದ ಮಳೆರಾಯ

ರಮೇಶ ಮೇಳಕುಂದಾ

ಕಲಬುರಗಿ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಸೋಮವಾರ ಬಿರುಗಾಳಿ, ಗುಡುಗು ಮಿಂಚು ಸಹಿತ ಮಳೆಯಾಗಿದೆ. ನಗರದಲ್ಲಿ ಸುಮಾರು ಒಂದು ಗಂಟೆ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ಸಂಗ್ರಹವಾಗಿ, ವಾಹನ ಸಂಚಾರಕ್ಕೆ ತೊಡಕಾಗಿತ್ತು. ಜೇರ‍್ಗಿ ಕ್ರಾಸ್​ ವೃತ್ತ, ಲಾಲ್​ಗೇರಿ ಕ್ರಾಸ್​, ಸಿದ್ದಿಬಾಷಾ ರ‍್ಗಾ ಸೇರಿ ವಿವಿಧೆಡೆ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಜನರ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಿತ್ತು. ಮಳೆಗಾಳಿಗೆ ಅಲ್ಲಲ್ಲಿ ಮರದ ಟೊಂಗೆಗಳು ಮುರಿದು, ವಿದ್ಯುತ್​ ಸಂರ‍್ಕ ಕಡಿತಗೊಂಡಿತು.

ಆಳಂದ ತಾಲೂಕಿನ ಮಾಡಿಯಾಳ ಗ್ರಾಮದಲ್ಲಿ ಭಾರಿ ಬಿರುಗಾಳಿ ಮಳೆಗೆ ಬಾಳೆ ಗಿಡಗಳು ನೆಲಕ್ಕೆ ಉರುಳಿವೆ. ಚಿತ್ತಾಪುರ ತಾಲೂಕಿನ ಟೆಂಗಳಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ವ್ಯಾಪ್ತಿಯಲ್ಲಿ ರ‍್ಜರಿ ಮಳೆಯಾಗಿದ್ದು, ಅಲ್ಲಲ್ಲಿ ಮನೆ ಮೇಲೆ ಅಳವಡಿಸಿದ ಪತ್ರಾಗಳು ಹಾರಿದ ಹೋದ ಟನೆ ನಡೆದಿದೆ.