Eshwarappa who held a meeting in Ilakalla  
ಜಿಲ್ಲೆ

ಇಳಕಲ್ಲನಲ್ಲಿ ಸಭೆ ನಡೆಸಿದ ಈಶ್ವರಪ್ಪ

ಇಳಕಲ್ಲ (ಗ್ರಾ): ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ೆ.4ರಂದು ನಡೆಯಲಿರುವ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ನಗರಕ್ಕೆ ಭೇಟಿ ನೀಡಿ ಕಡಪಟ್ಟಿ ಾರ್ಮ್ ಹೌಸ್‌ನಲ್ಲಿ ಮಂಗಳವಾರ ಸಭೆ ನಡೆಸಿದರು.

ಜಿಪಂ ಮಾಜಿ ಸದಸ್ಯ ವೀರೇಶ ಉಂಡೋಡಿ, ರಾಜುಗೌಡ ನಾಡಗೌಡ ಮತ್ತಿತರಿದ್ದರು.

ಕಾರ್ಯಕರ್ತರ ನಿವಾಸಕ್ಕೆ ಭೇಟಿ: ಈಶ್ವರಪ್ಪ ಬಿಜೆಪಿ ಧುರೀಣ ಆನಂದ ಚಲವಾದಿ ಅವರ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕರ್ತರ ಜತೆಗೆ ಚರ್ಚೆ ನಡೆಸಿದರು.

ಮುಖಂಡರಾದ ಅಜ್ಜಪ್ಪ ನಾಡಗೌಡ, ಪ್ರಭು ಕೊಡಗಲಿ ಜಕ್ಕಪ್ಪ ಕಳ್ಳಿಗುಡ್ಡ, ಲಿಂಗರಾಜ ಕುಂಬಾರ, ಸಂಗಮೇಶ ಭೋವೆರ, ವಿಜಯ ಜಾಲಗಾರ, ಮಂಜುನಾಥ ಪಾಟೀಲ, ಮಲ್ಲು ಜಾಲಗಾರ, ಗಂಗಪ್ಪ ಪೂಜಾರಿ, ವೀರೇಶ ಮನ್ನಾಪೂರ, ಮಲ್ಲು ಕುಂಬಾರ ಮತ್ತಿತರಿದ್ದರು.