ಜಿಲ್ಲೆ

ಇಳಕಲ್ ಮಠದಲ್ಲಿ ರವಿ ಮಾನಂಗೆಗೆ ಸತ್ಕಾರ

ಬೀದರ್: ಇಳಕಲ್‍ನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಬಸವ ಜಯಂತ್ಯುತ್ಸವದಲ್ಲಿ ಜನವಾಡದ ನುಲಿಯ ಚಂದಯ್ಯ ಸಮಾಜದ ಮುಖಂಡ ರವಿ ಮಾನಂಗೆ ಅವರನ್ನು ಸನ್ಮಾನಿಸಲಾಯಿತು.
ಮಠದ ಪೀಠಾಧಿಪತಿ ಗುರುಮಹಾಂತ ಸ್ವಾಮೀಜಿ ಹೂಮಾಲೆ ಹಾಕಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಬಸವ ತತ್ವ ಪ್ರಚಾರಕ್ಕೆ ರವಿ ಮಾನಂಗೆ ನೀಡಿರುವ ಕೊಡುಗೆಯನ್ನು ಅವರು ಸ್ಮರಿಸಿದರು.