ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿದರು. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಸಲಹೆಗಾರರಾದ ಡಾ. ಮೀನಾ ಚಂದಾವರಕರ್, ಸಂಘದ ಟೆಕ್ನಿಕಲ್ ವಿಭಾಗದ ನಿರ್ದೇಶಕ ಡಾ. ಆರ್.ಎನ್.ಹೆರಕಲ್ ಇದ್ದರು. 
ಜಿಲ್ಲೆ

ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ಕೋರ್ಸ್

ಬಾಗಲಕೋಟೆ: ಬಿವಿವಿ ಸಂಘದ ಬಸವೇಶ್ವರ ಇಂಜಿಯರಿಂಗ್ ಕಾಲೇಜಿನಲ್ಲಿ ನೂತನವಾಗಿ ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್ ಕೋರ್ಸ್ ಆರಂಭಿಸಿದೆ. ವೃತ್ತಿಪರ ವಿನೂತನ ಕೋರ್ಸಗಳನ್ನು ಬಳಸಿಕೊಳ್ಳಬೇಕು. ನಮ್ಮ ಕಾಲೇಜಿನಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಔದ್ಯೋಗಿಕ ಕ್ಷೇತ್ರವು ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಮೇಲೆ ಅವಲಂಭಿತವಾಗಿದೆ. ಉದ್ಯಮ ಕ್ಷೇತ್ರದ ಹಲವಾರು ಸಂರ್ಕೀರ್ಣ ಸವಾಲುಗಳಿಗೆ ತಾಂತ್ರಿಕ ಕ್ಷೇತ್ರಗಳ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಿಂದ ವಿನೂತನ ಪರಿಹಾರಗಳನ್ನು ಕಂಡುಕೊಳ್ಳುವುದು ಅವಶಕ್ಯವಾಗಿದೆ. ಭಾರತದ ಸರ್ಕಾರ ಎಐಸಿಟಿಇ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲು ಪ್ರೋತ್ಸಾಹ ನೀಡುತ್ತಿದೆ. ಈ ಕೋರ್ಸ್ನಲ್ಲಿ ವಿದ್ಯಾರ್ಥಿಗಳಿಗೆ ಹಾರ್ಡವೇರ್ ಮತ್ತು ಸಾಫ್ಟ್ವೇರ್ ಬಗ್ಗೆ ಜ್ಞಾನ ನೀಡಲಾಗುತ್ತದೆ ಎಂದರು.

ಕೈಗಾರಿಕಾ ಕ್ಷೇತ್ರದ ಪ್ರಸಕ್ತ ತಾಂತ್ರಿ ಬೇಡಿಕೆಗಳನ್ನು ಈಡೇರಿಸುವ ಮತ್ತು ಹೊಸ ಅವಿಷ್ಕಾರಗಳನ್ನು ಅಳವಡಿಸುವ ದೃಷ್ಟಿಯಿಂದ ಇಲೆಕ್ಟ್ರಾನಿಕ್ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳ ಪ್ರಮುಖ ಅಂಶಗಳ ಸೂಕ್ತ ಮಿಶ್ರಣದಿಂದ ವಿಶೇಷ ಪರಿಣಿತಿ ಹೊಂದಿದ ಸಮರ್ಥ ಪದವಿಧರರನ್ನು ದೇಶಕ್ಕೆ ನೀಡುವ ಉದ್ದೇಶದಿಂದ ಈ ಕೋರ್ಸ್ ಪ್ರಾರಂಭಿಸಲಾಗಿದೆ ಎಂದರು.

ಈ ವಿಭಾಗದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ನಾಲ್ಕು ವರ್ಷಗಳಲ್ಲಿ ಪ್ರಮುಖ ವಿಷಯಗಳಾದ ಎಂಬೆಡೆಡ್ ಸಿಸ್ಟಂ, ವಿಎಲ್‌ಎಸ್‌ಐ ವಿನ್ಯಾಸ, ಕೃತಕ ಬುದ್ಧಮತ್ತೆ ಮತ್ತು ಯಂತ್ರ ಕಲಿಕೆ, ಪೈಥಾನ್, ಸಿ++, ಜಾವಾ, ಯೂನಿಕ್ಟ್ ಶೆಲ್ ಪ್ರೋಗ್ರಾಮಿಂಗ್, ಆಪರೇಟಿಂಗ್ ಸಿಸ್ಟಂ, ಸೈಬರ್ ಸೆಕ್ಯೂರಿಟಿ ಮತ್ತು ಐಒಟಿಯಂತಹ ವಿವಿಧ ಕಂಪ್ಯೂಟರ್ ಭಾಷೆಗಳನ್ನು ಒಳಗೊಂಡ ಜ್ಞಾನವನ್ನು ಅಧ್ಯಯನ ಮಾಡುತ್ತಾರೆ ಎಂದು ತಿಳಿಸಿದರು.

ಉದ್ಯಮ ರಂಗದ ಪ್ರಮುಖ ಸ್ಮಾರ್ಟ್ ಸಾಧನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಂಶೋಧನೆಗೆ ಭದ್ರ ಅಡಿಪಾಯವನ್ನು ಒದಗಿಸುವುದು ಸೇರಿದಂತೆ ಕೌಶಲ ಪೂರ್ತಿ ವೃತ್ತಿಪರರು ಈ ಕೋರ್ಸ್ ಮೂಲಕ ದೇಶಕ್ಕೆ ಲಭ್ಯರಾಗುತ್ತಾರೆ. ಹೊಸ ಕೋರ್ಸ್ಗಾಗಿ ರಾಷ್ಟ್ರ ಮಟ್ಟದ ಪರಿಣಿತರಿಂದ ಪಠ್ಯಕ್ರಮ ವಿನ್ಯಾಸಗೊಳಿಸಿ ಆಧುನಿಕ ತಂತ್ರಜ್ಞಾನ ಹೊಂದಿದ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಮತ್ತು ಸುಸಜ್ಜಿತ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಹೊಸ ಅವಿಷ್ಕಾರಗಳನ್ನು ಕೈಗೊಳ್ಳಲು ಮತ್ತು ಅವರಲ್ಲಿ ಸೃಜನ ಶೀಲತೆಯನ್ನು ಉತ್ತೇಜಿಸಲು ಎಐಸಿಟಿಇಯಿಂದ ಐಡಿಯಾ ಲ್ಯಾಬ್‌ನ್ನು ಒಟ್ಟು ೧.೧೦ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಈ ಪ್ರಯೋಗಾಲಯದ ಪ್ರಯೋಜನೆಯನ್ನು ಪಡೆಯುತ್ತಿದ್ದಾರೆ ಎಂದರು.

ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಂಘದ ಸಲಹೆಗಾರರಾದ ಡಾ. ಮೀನಾ ಚಂದಾವರಕರ್, ಸಂಘದ ಟೆಕ್ನಿಕಲ್ ವಿಭಾಗದ ನಿರ್ದೇಶಕ ಡಾ. ಆರ್.ಎನ್.ಹೆರಕಲ್, ಕಾಲೇಜಿನ ಪ್ರಾಚಾರ್ಯೆ ಡಾ. ವೀನಾ ಸೋರಗಾವಿ, ಪ್ರೊ.ಬಿ.ಎಸ್.ಹರವಿ, ಆರ್.ಎಲ್.ನಾಯಕ ಸೇರಿದಂತೆ ಇತರರಿದ್ದರು.