ಜಿಲ್ಲೆ

ಇಮ್ರಾನ್ ಅಹ್ಮದ್‌ಗೆ ಪದಕ

ಚಾಮರಾಜನಗರ: ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಇಮ್ರಾನ್ ಅಹ್ಮದ್‌ಗೆ ಕಂಚು ಮತ್ತು ಬೆಳ್ಳಿ ಪದಕ ಲಭಿಸಿದೆ.

ನಗರದ ಯುವ ಕ್ರೀಡಾಪಟು ಇಮ್ರಾನ್ ಅಹ್ಮದ್, ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ, ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್, ಸ್ಟೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ಶೂಟಿಂಗ್ ರೇಂಜ್ ಸಹಯೋಗದಲ್ಲಿ ಬೆಂಗಳೂರಿನ ಸ್ಟೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕ್ಲಬ್‌ನಲ್ಲಿ ಜೂ.30 ರಿಂದ ಜು.8 ರವರೆಗೆ ನಡೆಯುತ್ತಿರುವ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ. 2017ರಲ್ಲಿ ಚಿನ್ನದ ಪದಕ, 2018-19ರಲ್ಲಿ 4 ಬೆಳ್ಳಿ ಪದಕ, 2017 ಮತ್ತು 22ರಲ್ಲಿ ಕಂಚಿನ ಪದಕ ಪಡೆದಿದ್ದರು.