ಜಿಲ್ಲೆ

ಇಬ್ಬರು ವಿದ್ಯಾರ್ಥಿಗಳು ಬಾವಿಪಾಲು

ಳಂದ: ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ನೀರುಪಾಲಾದ ಘಟನೆ ಮಗದಮಪುರ ಗಲ್ಲಿಯಲ್ಲಿ ಗುರುವಾರ ಸಂಭವಿಸಿದೆ.

ಬಾಳೇನಗಲ್ಲಿ ಬಡಾವಣೆ ನಿವಾಸಿಗಳಾದ ಶ್ರೀಶೈಲ ಲಕ್ಷ್ಮಣ ಹೀರಾಪುರ (13), ಲಕ್ಷ್ಮಣ ಗುಂಡಪ್ಪ ಮಡಿವಾಳ (12) ಮೃತರು. ಬಾಳೇನಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು, ಸ್ಕೂಲ್‌ಗೆ ಹೋಗದೆ ಮಗದಮಪುರ ಬಡಾವಣೆ ತೆರೆದ ಬಾವಿಯಲ್ಲಿ ಈಜಲು ಇಳಿದಿದ್ದರು. ಹೆಚ್ಚಿನ ನೀರು ಇರುವುದರಿಂದ ಈಜಲಾಗದೆ ಮುಳುಗಿ ಕೊನೆಯುಸಿರೆಳೆದಿದ್ದಾರೆ.

ಪಿಎಸ್‌ಐ ತಿರುಮಲೇಶ ಕುಂಬಾರ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪುಟ್ಟ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಸುದ್ದಿ ತಿಳಿಯುತ್ತಿದ್ದಂತೆ ಬಿಇಒ ಚಿತ್ರಶೇಖರ ದೇಗಲಮಡಿ ಘಟನಾ ಸ್ಥಳಕ್ಕೆ ದೌಡಾಯಿಸಿ ಮೃತರ ಪಾಲಕರಿಗೆ ಸಾಂತ್ವನ ಹೇಳಿದರಲ್ಲದೆ ಶಿಕ್ಷಣ ಇಲಾಖೆ ಮಕ್ಕಳ ಕಲ್ಯಾಣ ನಿಧಿಯಿಂದ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.