ಜಿಲ್ಲೆ

ಇಬ್ಬರು ಪುತ್ರಿಯರೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ

reportermng

ಮಂಗಳೂರು : ಮಹಿಳೆಯೊಬ್ಬರು ತನ್ನ ಪುತ್ರಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಮಂಗಳೂರಿನ ಕೊಡಿಯಾಲ್‌ಗುತ್ತಿನಲ್ಲಿ ಬುಧವಾರ ನಡೆದಿದೆ.

ವಿಜಯ (33) ಮತ್ತು ಶೋಭಿತಾ (4) ಮೃತ ದುರ್ದೈವಿಗಳು. ಮಹಿಳೆಯು ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, ಇನ್ನೋರ್ವ ಪುತ್ರಿ ಪವಾಡ ಸದೃಶವಾಗಿ ಬದುಕುಳಿದಿದ್ದಾಳೆ. ಜೀವನದಲ್ಲಿ ಜಿಗುಪ್ಸೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.