ಮುತ್ತಿನಕೊಪ್ಪ ಗ್ರಾಮದಲ್ಲಿ ಗಾಂಜಾ ಮಾರಾಟಗಾರರನ್ನು ಎನ್.ಆರ್.ಪುರ ಪೊಲೀಸರು ಬಂಧಿಸಿದರು. ಮಧು, ಸೋಮೇಶ್,ನವೀನ್, ಮುರುಗೇಶ್, ಸ್ವರೂಪ್, ಸೋಮೇಶ್ ಇದ್ದರು. 
ಜಿಲ್ಲೆ

ಇಬ್ಬರು ಗಾಂಜಾ ಮಾರಾಟಗಾರರ ಬಂಧನ

ಎನ್.ಆರ್.ಪುರ: ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮುತ್ತಿನಕೊಪ್ಪದ ಸಮೀಪದ ಮುಖ್ಯ ರಸ್ತೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗದ ಮಹಮ್ಮದ್ ಪತಾವುಲ್ಲಾ ಹಾಗೂ ಭದ್ರಾವತಿ ಪ್ರವೀಣ್ ಬಂಧಿತ ಆರೋಪಿಗಳು. ಪೊಲೀಸರು ಮುತ್ತಿನಕೊಪ್ಪ ಗ್ರಾಮದ ಮುಖ್ಯ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಮಹಮ್ಮದ್ ಪತಾವುಲ್ಲಾ ಪ್ರವೀಣ್ ಅವರನ್ನು ತಪಾಸಣೆ ನಡೆಸಿದಾಗ ಇಬ್ಬರ ಪ್ಯಾಂಟ್ ಜೇಬಿನಲ್ಲಿ ಗಾಂಜಾ ಪತ್ತೆಯಾಗಿದೆ. ಒಟ್ಟು 104 ಗ್ರಾಂ ಗಾಂಜಾ ಹಾಗೂ ಬೈಕ್‌ನ್ನು ವಶಪಡಿಸಿಕೊಂಡರು. ಗಾಂಜಾ ಮಾರಾಟಕ್ಕೆ ತಂದಿರುವುದಾಗಿ ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ಬಿ.ಎಸ್.ನಿರಂಜನ್ ಗೌಡ, ಸಿಬ್ಬಂದಿ ಸೋಮೇಶ್, ನವೀನ್, ಬಿನು, ಮುರುಗೇಶ, ಸ್ವರೂಪ್ ಪಾಲ್ಗೊಂಡಿದ್ದರು.