ಜಿಲ್ಲೆ

ಇಪ್ಪಾಡಿಯಲ್ಲಿ ಮೊಳಗುತ್ತಿದೆ ಹರೇ ತಿಮ್ಮಪ್ಪನ ನಾಮ ಜಪ : ವಿಮಾನ ಗೋಪುರ, ರಾಜಗೋಪುರ, ಕಳಸ ಪ್ರತಿಷ್ಠಾಪನಾ ಮಹೋತ್ಸವ ಇಂದು, ನಾಳೆ

Tumakuru

ಅರುಣ ಎಂ.ಜಿ. ಕುಣಿಗಲ್​

ಈ ದೇಗುಲದ ಒಳ ಪ್ರವೇಶಿಸುತ್ತಿದ್ದಂತೆ ಗೋವಿಂದ ಹರೇ ಗೋವಿಂದ.. ತಿಮ್ಮಪ್ಪ ಹರೇ ತಿಮ್ಮಪ್ಪ... ಎಂದು ಭಕ್ತರು ಜಪಿಸುತ್ತಾರೆ. ಎಷ್ಟೇ ಸಂಕಟವಿದ್ದರೂ ದೇವರಿಗೆ ಒಪ್ಪಿಸಿ ಹೊರ ಬರುವಾಗ ಮನಸ್ಸು ಹಗುರ, ಸಾಾತ್​ ವಿಷ್ಣು ದೇವನ ಅಭಯಹಸ್ತ ತಮ್ಮ ತಲೆಯ ಮೇಲಿರುವ ಭಾವ. ಬೆಟ್ಟದಿಂದ ಕೆಳಗಿಳಿಯುತ್ತಿದ್ದಂತೆ ನಮ್ಮೆಲ್ಲ ಕಷ್ಟವೂ ಕರಗುತ್ತಿರುವ ನಿರಾಳತೆ...

ಇದು ಇಪ್ಪಾಡಿ ಗ್ರಾಮದ ತಿಮ್ಮರಾಯಸ್ವಾಮಿ ದೇಗುಲಕ್ಕೆ ಶ್ರದ್ಧಾಭಕ್ತಿಯಿಂದ ಭೇಟಿ ನೀಡುವ ಪ್ರತಿಯೊಬ್ಬರ ಮನದಲ್ಲಿ ಮೂಡುವ ಭಾವ. ಇಪ್ಪಾಡಿ ಅರಣ್ಯ ತಪ್ಪಲಿನ ಬೆಟ್ಟದ ಮೇಲಿರುವ ಈ ದೇಗುಲ ಊರಿಗೇ ಕಳಸವಿದ್ದಂತೆ. ಸುತ್ತಲೂ ಹಚ್ಚಹಸಿರ ಹೊದಿಕೆ ಹೊದ್ದ ರಮಣೀಯ ಪರಿಸರ, ತಂಪಾದ ಗಾಳಿ, ಪ್ರಶಾಂತತೆಯಲ್ಲೂ ಪಗಳ ಕಲರವ... ಪ್ರಕೃತಿ ಮಡಿಲಲ್ಲಿ ದೇವರ ಪ್ರಾರ್ಥನೆಗೆ ಕುಳಿತರೆ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ... ಇಂತಹ ೇತ್ರಕ್ಕೆ ತನ್ನದೇ ಆದ ವೈಶಿಷ್ಟ್ಯ, ಇತಿಹಾಸ ಇದೆ.

ಚೋಳರ ಕಾಲದಲ್ಲಿ ನಿರ್ಮಾಣ:

ಈ ದೇಗುಲವನ್ನು ಚೋಳ ಮಹಾರಾಜರು ಕಟ್ಟಿಸಿದ್ದು, ಮೂಲ ವಿಗ್ರಹದ ಎಡಗೈಯಲ್ಲಿ ಗದೆ, ಬಲಗೈ ಅಭಯಹಸ್ತ, ವಿಗ್ರಹದ ಕೆಳಗೆ ಗರುಡ ವಾಹನದ ಚಿಹ್ನೆಯೂ ಇದೆ. ಇದು ಸತ್ಯನಾರಾಯಣ ಮಹಾವಿಷ್ಣು ವಿಗ್ರಹ . ಹಿಂದಿನ ಕಾಲದವರು ತಿಮ್ಮಪ್ಪನ ದೇಗುಲ ಎನ್ನುತ್ತಿದ್ದರು. ಅದೇ ಹೆಸರು ಚಾಲ್ತಿಯಲ್ಲಿದೆ. ಬೆಟ್ಟದ ಮೇಲೆ ದೇಗುಲ ಇರುವುದರಿಂದ ಹರೇ ತಿಮ್ಮಪ್ಪ, ಹರೇ ತಿಮ್ಮರಾಯಸ್ವಾಮಿ ಎನ್ನುತ್ತಾರೆ. ಹಿಂದೂ ಪುರಾಣದಲ್ಲಿ ಭಗವಾನ್​ ವೆಂಕಟೇಶ್ವರನನ್ನು ವಿಷ್ಣುವಿನ ಪವಿತ್ರ ಅವತಾರ ಎನ್ನಲಾಗಿದೆ.

ಸರ್ಪ ಸಂಚಾರವೂ ಇದೆ: ತಿಮ್ಮರಾಯಸ್ವಾಮಿ ದೇಗುಲದ ಹೆಬ್ಬಾಗಿಲ ಒಳ ಪ್ರವೇಶಿಸುತ್ತಿದ್ದಂತೆ ಎಡಭಾಗದಲ್ಲಿ ಗರುಡ ಆಂಜನೇಯ ಗುಡಿ ಇದೆ. ಪಕ್ಕದಲ್ಲೇ ಸರ್ಪ ಸಂಚಾರವೂ ಇದೆ. ಭಕ್ತಿ&ಮಡಿಯಲ್ಲಿ ದೇವರನ್ನು ಆರಾಧಿಸಬೇಕು. ತಿಮ್ಮಪ್ಪ ಸ್ವಾಮಿಗೆ ಭಕ್ತಿಯಿಂದ ಪಂಚಾಮೃತ ಅಭಿಷೇಕ, ಬೆಣ್ಣೆ ಅಲಂಕಾರ, ವಿಶೇಷ ಪೂಜೆ ಮಾಡಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸ, ವೈಕುಂಠ ಏಕಾದಶಿ ಸೇರಿದಂತೆ ವಿಶೇಷ ದಿನಗಳಲ್ಲಿ ದಿನವಿಡೀ ಪೂಜೆ ನಡೆಯುತ್ತೆ.

ನರಸಿಂಹಸ್ವಾಮಿಗೆ ಮೊದಲ ಪೂಜೆ: ಬೆಟ್ಟದ ಕೆಳಗೆ ಚೋಳರ ಕಾಲದಲ್ಲಿ ನಿರ್ಮಾಣಗೊಂಡ ನರಸಿಂಹಸ್ವಾಮಿ ದೇಗುಲವಿದೆ. ಇದನ್ನು ಸ್ಥಳಿಯರು ಬಾಳಾರಪ್ಪ ಸ್ವಾಮಿ ಎನ್ನುತ್ತಾರೆ. ಪ್ರತಿದಿನ ಮೊದಲ ಪೂಜೆ ನರಸಿಂಹಸ್ವಾಮಿಗೆ, ನಂತರ ತಿಮ್ಮರಾಯಸ್ವಾಮಿ ಆಗುತ್ತೆ. ದಾನಿಗಳ ನೆರವಿನಿಂದ ಈ ದೇಗುಲದ ಜೀಣೋರ್ದ್ಧಾರ ಕಾರ್ಯವೂ ನಡೆದಿದೆ.

ದೊಣೆಯಲ್ಲಿನ ನೀರಿಗಿದೆ ವಿಶೇಷ ಶಕ್ತಿ: ತಿಮ್ಮರಾಯಸ್ವಾಮಿ ದೇಗುಲದ ಮುಂಭಾಗ ಬೆಟ್ಟದ ಮೇಲೆ ನರಸಿಂಹಸ್ವಾಮಿಯ ಪಾದದ ಗುರುತು ಇದೆ. ಪಕ್ಕದಲ್ಲೇ ದೊಣೆ ಇದ್ದು, ಬೇಸಿಗೆಯಲ್ಲಿ ನೀರು ಸ್ವಲ್ಪ ಕಡಿಮೆಯಾದರೂ ವರ್ಷಪೂರ್ತಿ ತುಂಬಿರುತ್ತೆ. ಇಲ್ಲಿಂದಲೇ ದೇವರಾಯನದುರ್ಗಕ್ಕೆ ನರಸಿಂಹಸ್ವಾಮಿ ಹೋದರು. ಈ ನೀರಲ್ಲಿ ಸ್ನಾನ ಮಾಡಿದರೆ ಚರ್ಮರೋಗ, ಗ್ರಹದೋಶ ನಿವಾರಣೆ ಎಂಬ ಪ್ರತಿತಿ ಇದೆ.

ಸಂಕ್ರಾಂತಿ ಹಬ್ಬದಲ್ಲಿ ಗರುಡ ಪ್ರದಣೆ!: ಧನುರ್ಮಾಸ ಮತ್ತು ಸಂಕ್ರಾಂತಿ ಹಬ್ಬದಂದು ವಿಶೇಷ ಪೂಜೆ ನಡೆಯುತ್ತೆ. ದೇಗುಲದ ಮುಂಭಾಗ ಧ್ವಜಸ್ತಂಭವಿದ್ದು, ಸಂಕ್ರಾಂತಿ ಹಬ್ಬದ ದಿನ ಸಂಜೆ ಭಕ್ತರು ತುಪ್ಪದ ದೀಪ ಹಚ್ಚುತ್ತಾರೆ. ಆ ವೇಳೆ ಗರುಡ ಪ ಪ್ರದಣೆ ಹಾಕುತ್ತೆ ಎಂಬ ಪ್ರತಿತಿ ಇದೆ. ಅದೇ ಸಮಯದಲ್ಲಿ ದೇವರಿಗೆ ಮಹಾಮಂಗಳಾರತಿ ನೆರವೇರುತ್ತೆ. ಗ್ರಾಮಸ್ಥರು ದನ&ಕರುಗಳನ್ನು ಕರೆತಂದು ಕಿಚ್ಚುಹಾಯಿಸಿ ಹೋಗುತ್ತಾರೆ ಎಂದು ಅರ್ಚಕ ಐಯನ್​ ನಾರಾಯಣಸ್ವಾಮಿ ವಿವರಿಸಿದ್ದಾರೆ.

ವರ್ಷಕ್ಕೊಮ್ಮೆ ಪರ: ಪ್ರತಿ ವರ್ಷ ದೇವರಿಗೆ ಪರ ಸೇವೆ ನಡೆಯುತ್ತೆ. ಭಕ್ತರಿಂದಲೇ ಭಕ್ತರಿಗಾಗಿ ಅನ್ನದಾನ ನಡೆಯುತ್ತೆ. ಹತ್ತು ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ. ಎಲ್ಲ ಸಮುದಾಯದವರೂ ಹರಿಸೇವೆಗೆ ಕೈಲಾದಷ್ಟು ಸಹಕರಿಸುತ್ತಾರೆ. ಆ ದಿನ ದೊಡ್ಡ ಜಾತ್ರೆಯಂತೆೆ ಭಾಸವಾಗುತ್ತೆ. ಊರಿಗೆ ಊರೇ ಹರಿಸೇವೆಯಲ್ಲಿ ಮುಳುಗಿರುತ್ತೆ ಎಂದು ಅರ್ಚಕ ನರಸಿಂಹಮೂರ್ತಿ ವಿವರಿಸಿದರು.

ಕುಣಿಗಲ್​ ತಾಲೂಕು ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಗ್ರಾಮದಲ್ಲಿ ಹರೇ ತಿಮ್ಮಪ್ಪನ ನಾಮ ಜಪ ಮೊಳಗುತ್ತಿದೆ. ಐತಿಹಾಸಿಕ ದೇಗುಲದ ವಿಮಾನ ಗೋಪುರ, ರಾಜಗೋಪುರ, ಕಳಸ ಪ್ರತಿಷ್ಠಾಪನಾ ಮಹೋತ್ಸವ ಇಂದು&ನಾಳೆ (ಮೇ 24, 25) ನಡೆಯಲಿದ್ದು, ಸಾವಿರಾರು ಭಕ್ತರು ಸಾಯಾಗಲಿದ್ದಾರೆ. ಇಪ್ಪಾಡಿ ಶ್ರೀ ತಿಮ್ಮರಾಯಸ್ವಾಮಿ ದೇವಸ್ಥಾನ ಸಮಿತಿ ಮತ್ತು ಭಕ್ತರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ದೇಗುಲದ ಅರ್ಚಕರು ಮತ್ತು ನೆಲಮಂಗಲದ ಆಗಮಿಕರಾದ ಗೋಪಾಲಕೃಷ್ಣ ಭಟ್ಟ ನೇತೃತ್ವದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ. ಮೇ 24ರ ಬೆಳಗ್ಗೆಯಿಂದಲೇ ವಿವಿಧ ಪೂಜೆ ಶುರುವಾಗಲಿದ್ದು, ಸಂಜೆ ಹೋಮ ನಡೆಯಲಿದೆ. 25ರಂದು ಬ್ರಾಹ್ಮಿ ಮುಹೂರ್ತದಲ್ಲಿ ವಿಮಾನ ಗೋಪುರ, ರಾಜಗೋಪುರ, ಕಳಸ ಪ್ರತಿಷ್ಠಾಪನೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕ, ಮಧ್ಯಾಹ್ನ ಅನ್ನದಾಸೋಹ ನಡೆಯಲಿದೆ.

ಸುತ್ತ ಹತ್ತಾರು ಗ್ರಾಮಸ್ಥರು ಯಾವುದೇ ಶುಭಕಾರ್ಯವಿದ್ದರೂ ಹರೇ ತಿಮ್ಮಪ್ಪನಿಗೆ ಪೂಜೆ ಮಾಡಿಸ್ತಾರೆ. ರೈತರು ಜಮೀನಿನಲ್ಲಿ ಬೋರ್​ವೆಲ್​ ಕೊರೆಸುವ ಮುನ್ನ ಹೂ ಕೇಳಿ ಸ್ವಾಮಿಯ ಅಪ್ಪಣೆ ಪಡೆಯುತ್ತಾರೆ. ಮಕ್ಕಳಿಲ್ಲದ ಅದೆಷ್ಟೋ ಮಂದಿ ತಿಮ್ಮಪ್ಪನಿಗೆ ಸಂಕಲ್ಪ ಮಾಡಿದ್ದಾರೆ. ಸ್ವಾಮಿಯ ಆಶೀರ್ವಾದದಿಂದ ಸಂತಾನ ಭಾಗ್ಯವೂ ಒಲಿದಿದೆ. ಬಳಿಕ ಭಕ್ತರು ಹರಕೆ ತೀರಿಸಿದ್ದಾರೆ. ದೇವರ ಶಕ್ತಿ ಅಪಾರ. ಐಯನ್​ ನರಸಿಂಹಸ್ವಾಮಿ, ಪ್ರಧಾನ ಅರ್ಚಕರು
ಮುಜರಾಯಿ ಇಲಾಖೆಗೆ ಈ ದೇಗುಲ ಒಳಪಟ್ಟಿದ್ದರೂ ಭಕ್ತರೇ ಮುಂದೆ ನಿಂತು 10 ವರ್ಷದಿಂದ ದೇಗುಲದ ಜೀಣೋರ್ದ್ಧಾರ ನಡೆಸಿದ್ದಾರೆ. ದೇಗುಲದ ಮಹಾದ್ವಾರವನ್ನು ಅತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ. ಗ್ರಾಮದ ನಿವೃತ್ತ ಶಿಕ್ಷಕ ವೆಂಕಟಾಚಲಯ್ಯ ಕುಟುಂಬಸ್ಥರು ಹರೇ ತಿಮ್ಮಪ್ಪ ದೇಗುಲದ ಆವರಣದಲ್ಲೇ ಲಕ್ಷಿ$್ಮ ದೇಗುಲ ನಿರ್ಮಿಸಿದ್ದು, ಕಳೆದ ವರ್ಷವಷ್ಟೇ ಲೋಕಾರ್ಪಣೆಯಾಗಿದೆ. ರಾಜಗೋಪಾಲಯ್ಯ, ಹಿರಿಯ ಅರ್ಚಕರು