ಜಿಲ್ಲೆ

ಇನ್ಶೂರೆನ್ಸ್ ಸ್ಕೀಮ್‌ಗೆ ಅರ್ಜಿ ಆಹ್ವಾನ

ಚಾಮರಾಜನಗರ: ತೋಟಗಾರಿಕೆ ಇಲಾಖೆಯಿಂದ 2024-25ನೇ ಸಾಲಿನಲ್ಲಿ ತೆಂಗು ಅಭಿವೃದ್ಧಿ ಮಂಡಳಿ (ಸಿಡಿಬಿ) ಮತ್ತು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್, ತ್ರಿಪುನಿತುರ ಸಹಯೋಗದಲ್ಲಿ ಕೆರ ಸುರಕ್ಷಾ ಇನ್ಶೂರೆನ್ಸ್ ಸ್ಕೀಮ್ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 65 ವರ್ಷದೊಳಗಿನ ತೆಂಗು ಮರ ಹತ್ತುವವರು, ನೀರಾ ತೆಗೆಯುವವರು, ತೆಂಗಿನಕಾಯಿ ಕೀಳುವವರು, ನೀರಾ ಟ್ಯಾಪರ್ಸ್‌ಗೆ, ಹೈಬ್ರಿಡೈಜೇಷನ್ ಕೆಲಸಗಾರರು ಈ ಯೋಜನೆಗೆ ಒಳಪಡಲಿದ್ದಾರೆ. ರೈತರ ವಂತಿಗೆ ಮೊತ್ತವನ್ನು ಕೊಕೊನೆಟ್ ಡೆವಲಪ್‌ಮೆಂಟ್ ಬೋರ್ಡ್, ಕೊಚ್ಚಿನ್ ಅವರ ಹೆಸರಿನಲ್ಲಿ ಡಿಡಿ ತೆಗೆದು ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಭಾವಚಿತ್ರ ಸಲ್ಲಿಸಬೇಕು. ಮಾಹಿತಿ ಹಾಗೂ ಅರ್ಜಿಗಾಗಿ ಆಯಾ ತಾಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿಯ ತಾಂತ್ರಿಕ ಸಿಬ್ಬಂದಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.