ಚಿತ್ರದುರ್ಗ: ಅಂದಾಜು ಎರಡೂವರೆ ವರ್ಷಗಳ ಕಾಲ ವಿಳಂಬದ ಬಳಿಕ ಕಳೆದ ಮಾರ್ಚ್‌ನಿಂದ ಪ್ರಾರಂಭವಾಗಿರುವ ಮುರುಘಾಮಠದ ಅರಸನಕೆರೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ನಡುವೆಯೇ, ಈ ಕೆರೆ ಅಭಿವೃದ್ಧಿಗೆ ಸಂಬಂಧ 2ಮತ್ತು 3ನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಎರಡನೇ ಹಂತದಲ್ಲಿ 2.27 ಕೋಟಿ ರೂ. ವೆಚ್ಚದ ಕಾಮಗಾರಿಗೆ ಕುಡಾ ಆಡಳಿತಾತ್ಮಕ ಅನುಮೋದನೆ ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಮೂರನೇ ಹಂತದಲ್ಲಿ ಕೆರೆಯಲ್ಲಿ ಟ್ರಿಟ್‌ಪ್ಲಾಂಟ್ ಸ್ಥಾಪಿಸಲು ಅಂದಾಜು 5.89 ಕೋಟಿ ರೂ. ವೆಚ್ಚದ ಡಿಪಿಆರ್ ಸಿದ್ಧಪಡಿಸಿದೆ.
ಅಂದಾಜು 34.25 ಎಕರೆ ವಿಸ್ತೀರ್ಣದ ಈ ಕೆರೆ ಅಭಿವೃದ್ಧಿಗೆ ಕುಡಾ ಮೊದಲ ಹಂತದ ಕಾಮಗಾರಿ ಚುರುಕಿಗೆ ಅಗತ್ಯ ಕ್ರಮ ವಹಿಸಬೇಕಿದೆ. ಗುತ್ತಿಗೆದಾರನ ಹಾಗೂ ಮಳೆಗಾಲದ ಕಾರಣಕ್ಕೆ ವಿಳಂಬವಾಗಿದೆ ಎಂದು ಪ್ರಾಧಿಕಾರದ ಮೂಲಗಳು ಹೇಳಿವೆ. ಆದರೂ ಮೂರು ತಿಂಗಳ ಅವಧಿಯೊಳಗೆ ಪ್ರಗತಿಯಲ್ಲಿರುವ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ.
ಎರಡನೇ ಹಂತದಲ್ಲೂ ವಾಕಿಂಗ್‌ಪಾಥ್: ಎರಡನೇ ಹಂತದಲ್ಲಿ ಜೆಎಂಐಟಿ ಸರ್ಕಲ್‌ನಿಂದ ದಾವಣಗೆರೆ ರಸ್ತೆಗೆ ಹೊಂದಿಕೊಂಡಂತೆ ವಾಕಿಂಗ್‌ಪಾಥ್, ಸ್ಟೋನ್‌ಪಿಚ್ಚಿಂಗ್‌ವರ್ಕ್, ಚೈನ್‌ಲಿಂಕ್‌ಪೆನ್ಸಿಂಗ್,ವಿದ್ಯುತ್ ದೀಪಗಳು, ಪ್ಲಾಂಟೇಷನ್ ಮತ್ತು ಲ್ಯಾಂಡ್‌ಸ್ಕೇಪಿಂಗ್ ಕಾಮಗಾರಿಯನ್ನು 2.27 ಕೋಟಿ ರೂ.ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
ಎನ್‌ಇಬಿಆರ್ ಟೈಪ್ ಎಸ್‌ಟಿಪಿ: ಮೂರನೇ ಹಂತದಲ್ಲಿ ಎನ್‌ಇಬಿಆರ್ ಟೈಪ್ ಎಸ್‌ಟಿಪಿ(ವಾಟರ್ ಟ್ರಿಟ್‌ಮೆಂಟ್ ಪ್ಲಾಂಟ್)ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಅಂದಾಜು 5.76 ಕೋಟಿ ರೂ. ವೆಚ್ಚದ ಟ್ರಿಟ್‌ಮೆಂಟ್ ಪ್ಲಾಂಟ್‌ನಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದೆ ಕೆರೆ ನೀರನ್ನು ಶುದ್ಧೀಕರಿಸಲಾಗುತ್ತದೆ.
ಇದಕ್ಕಾಗಿ 5.4 ಎಂಎಲ್‌ಡಿ ಸಾಮರ್ಥ್ಯದ ್ಞಠ್ಠ್ಟಿಚ್ಝ ಛ್ಞಿಟಜಛ್ಞಿಟ್ಠ ಚಿಜಿಟ್ಟಛಿಚ್ಚಠಿಟ್ಟ ಎಸ್‌ಟಿಪಿಯನ್ನು ಒಂದೂವರೆ ಎಕ ರೆ ವಿಸ್ತೀರ್ಣದಲ್ಲಿ ನಿರ್ಮಿಸಲಾಗುತ್ತದೆ. ಮೊದಲ ಹಂತದಲ್ಲಿ 4.70 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕಾಮಗಾರಿಗ ಳಲ್ಲಿ ವಾಕಿಂಗ್‌ಪಾಥ್, ನಡುಗಡ್ಡೆ ನಿರ್ಮಾಣ, ಬೋಟಿಂಗ್, ಮಕ್ಕಳ ಆಟಿಕೆಗಳ ಸ್ಥಾಪನೆ ಮೊದಲಾದ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
-----
ಕೋಟ್
ನಗರದ ಅರಸನಕೆರೆ ಅಭಿವೃದ್ಧಿಯ ಮೊದಲ ಹಂತದ ಕಾಮಗಾರಿ ಮಳೆಗಾಲ ಮತ್ತಿತರ ಕಾರಣಕ್ಕೆ ಮಂದಗತಿಯಿಂದ ಸಾಗಿದೆ. ಇದ ನ್ನು ಚುರುಕಗೊಳಿಸಿ ಮೂರು ತಿಂಗಳ ಒಳಗೆ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು.
ಎಂ.ಕೆ. ತಾಜ್‌ಪೀರ್, ಅಧ್ಯಕ್ಷ, ನಗರಾಭಿವೃದ್ಧಿ ಪ್ರಾಧಿಕಾರ, ಚಿತ್ರದುರ್ಗ.
----