ಚಿಕ್ಕಮಗಳೂರು: ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಪರಿಸರ ರಕ್ಷಣೆ ಇಂತಹ ಅನೇಕ ಸಮಾಜಮುಖಿ ಉತ್ತಮ ಕಾರ್ಯಕ್ರಮಗಳನ್ನು ಇನ್ನರ್ ವೀಲ್ ಸಂಸ್ಥೆ ಆಯೋಜನೆ ಮಾಡುವ ಅಗತ್ಯವಿದೆ ಎಂದು ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ ತಿಳಿಸಿದರು.
ನಗರದ ಟಿಎಂಎಸ್‌ನ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಇನ್ನರ್ ವೀಲ್ ಕ್ಲಬ್ ಚಿಕ್ಕಮಗಳೂರು ಜಿಲ್ಲೆ-೩೧೮ ಇದರ ೨೦೨೫-೨೬ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಯನಾ ಸಂತೋಷ್ ಅವರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಯೋಜನೆ, ಯೋಚನೆಗಳ ಮೂಲಕ ಕರ್ತವ್ಯ ನಿರತರಾಗಬೇಕು ಎಂದು ಕರೆನೀಡಿದರು.
ಸಮಾಜದಲ್ಲಿ ಆಶಕ್ತರನ್ನು ಕಂಡಾಗ, ನಮ್ಮ ಸಹಾಯಹಸ್ತ ಬಯಸುವವರಿಗಾಗಿ ಸಹಾಯದ ಜೊತೆಗೆ ಸೇವೆ ನೀಡುವುದೇ ಇನ್ನರ್ ವೀಲ್ ಸಂಸ್ಥೆಯ ಪ್ರಮುಖ ಉz್ದೆÃಶ. ರೋಟರಿ ಕ್ಲಬ್ ಮತ್ತು ಇನ್ನರ್‌ವೀಲ್ ಕ್ಲಬ್‌ಗಳಿಂದ ಹೆಚ್ಚು ಸದಸ್ಯರು ವಿಮುಖರಾಗುತ್ತಿದ್ದಾರೆ. ಈ ಮಧ್ಯೆ ಈ ಕ್ಲಬ್‌ನಲ್ಲಿ ದಾನಿಗಳಾಗಿರುವ ೧೫ ನೂತನ ಸದಸ್ಯರು ಸದಸ್ಯತ್ವ ಪಡೆದುಕೊಂಡಿರುವುದು ವಿಶೇಷ. ಈ ಮೂಲಕ ಕ್ಲಬ್ ಉತ್ತಮವಾಗಿ, ಸುಲಲಿತವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಜೀವನದಲ್ಲಿ ಸಂಸ್ಕೃತಿ ಸಂಸ್ಕಾರ ಇವುಗಳನ್ನು ಸರಿಯಾದ ರೀತಿಯಲ್ಲಿ ಉಳಿಸಿ-ಬೆಳೆಸಿದಾಗ ಮುಂದಿನ ಪೀಳಿಗೆಯನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಲು ಸಹಕಾರಿಯಾಗಲಿದೆ. ಕಷ್ಟದ ಅರಿವು ತಮ್ಮ ಮಕ್ಕಳಲ್ಲಿ ಬೆಳೆಸಬೇಕು. ಆಗ ಮಾತ್ರ ಮಕ್ಕಳು ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ನೂತನ ಅಧ್ಯಕ್ಷೆ ನಯನಾ ಸಂತೋಷ್ ಅಧಿಕಾರ ಸ್ವೀಕರಿಸಿ ಮಾತನಾಡಿ, ಜನಪರವಾಗಿ ಸೇವೆ ಸಲ್ಲಿಸುತ್ತಿರುವ ಇನ್ನರ್ ವೀಲ್ ಕ್ಲಬ್‌ಗೆ ತಮ್ಮನ್ನು ಅಧ್ಯಕ್ಷರಾಗಿ ಆಯ್ಕೆಮಾಡಿರುವುದಕ್ಕೆ ಆಬಾರಿಯಾಗಿz್ದÉÃನೆ ಎಂದರು.
ಮಾಜಿ ಅಧ್ಯಕ್ಷೆ ಶಾಲಿನಿ ನಾಗೇಶ್ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು ತೃಪ್ತಿ ತಂದಿದೆ. ಈ ಎಲ್ಲಾ ಕಾರ್ಯಗಳಲ್ಲಿ ಸಹಕರಿಸಿದ ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಲಬ್‌ನ ಉಪಾಧ್ಯಕ್ಷೆ ಮಾಲವಿ ರಘುನಂದನ್, ಕಾರ್ಯದರ್ಶಿ ಶಾಲಿನಿ ನಾಗೇಶ್, ಖಜಾಂಚಿ ಸ್ನೇಹ ಸಂತೋಷ್, ಐಎಸ್‌ಓ ಸೌನಲ್ಯ ನಟರಾಜ್, ಎಡಿಟರ್ ನವ್ಯ ಅಮಿತ್ ಮತ್ತಿತರರು ಉಪಸ್ಥಿತರಿದ್ದರು.