ಇನ್ನರ್ ವೀಲ್ ಕ್ಲಬ್ ಆಫ್ ಗದಗ್ ಮಿಡ್ ಟೌನ್ ವತಿಯಿಂದ ಗದಗ್ ಸೂರ್ಯ ನಗರದ ವೀರಾಂಜನೇಯ ದೇವಸ್ಥಾನದಲ್ಲಿ ಮೇ 1 ಕಾರ್ಮಿಕರ ದಿನಾಚರಣೆಯ ಅಂಗವಾಗಿ ಗದಗ್ ನಗರದ ಮುಳುಗುಂದ ನಾಕಾ ಬಸ್ ಡಿಪೋ ದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಮಹಿಳೆಯರಿಗೆ ಹೂ ಹಾಗೂ ಉಡುಗೊರೆ ಕೊಟ್ಟು ಗೌರವಿಸಲಾಯಿತು. ಮತ್ತು ಅಲ್ಪ ಉಪಹಾರದ ವ್ಯವಸ್ಥೆಯನ್ನು ಮಾಡಿಸಲಾಯಿತು. ಇದರ ಪ್ರಾಯೋಜಕತ್ವವನ್ನು ಕ್ಲಬ್ಬಿನ ಮಾಜಿ ಅಧ್ಯಕ್ಷರಾದ ಶ್ರೀಮತಿ ಡಾ. ಲಲಿತಾ ಲಿಂಗಾರೆಡ್ಡಿ, ಹಾಗೂ ಸದಸ್ಯರಾದ ಶ್ರೀಮತಿ ಡಾ. ದೀಪಾ ಮೂರ್ ಶಿಳ್ಳಿನ ಅವರು ವಹಿಸಿಕೊಂಡಿದ್ದರು. ಇಂದಿನ ಸಮಾಜದಲ್ಲಿ ಮಹಿಳೆಯರು ಮನೆ, ಗಂಡ, ಮಕ್ಕಳು ನೋಡಿಕೊಳ್ಳುವುದರ ಜೊತೆಗೆ ಹೊರಗಡೆ ಕೆಲಸ ಮಾಡುವುದು ಸರ್ವೇಸಾಮಾನ್ಯವಾಗಿದೆ. ಡಾಕ್ಟರ್ ರಾಗಿ , ಇಂಜಿನಿಯ ರಾಗಿ ಬಸ್ ಕಂಡಕ್ಟರ್, ಡ್ರೈವರ್, ವಿಮಾನ ಚಾಲಕರಾಗಿ ಇನ್ನು ಅನೇಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ತಮ್ಮ ಸ್ವಂತ ಕಾಲ ಮೇಲೆ ನಿಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮೆಕ್ಯಾನಿಕ್ ಆಗಿ ಕೆಲಸ ಮಾಡೋದು ತುಂಬಾ ವಿರಳ.ಅಂತ ಮಹಿಳೆಯರನ್ನು ಗುರುತಿಸಿ ಇವರಿಗೆ ಸನ್ಮಾನಿಸುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಕ್ಲಬ್ಬಿನ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಬಿರಾದಾರ್, ಖಜಾಂಚಿ ಶ್ರೀಮತಿ ರಾಣಿ ಚಂದಾವರಿ, ಮಾಜಿ ಅಧ್ಯಕ್ಷರಾದ ಶ್ರೀಮತಿ ಡಾ. ಲಲಿತಾ ಲಿಂಗಾ ರೆಡ್ಡಿ ಸೂರ್ಯ ನಗರದ ನಿವಾಸಿಯಾದ ಶ್ರೀಮತಿ ಶಾರದಾ ಕಳಸಗೊಂಡ, ಶ್ರೀಮತಿ ಮುತ್ತಾ ತುಪ್ಪದ, ಶ್ರೀಮತಿ ಭಾರತಿ ಗಾಳರಡ್ಡಿ ಉಪಸ್ಥಿತರಿದ್ದರು.