ಚಿಕ್ಕಮಗಳೂರು: ದತ್ತಪೀಠ ಸಂಪೂರ್ಣವಾಗಿ ಹಿಂದೂಗಳಿಗೆ ಸೇರಬೇಕು ಎಂದು ನಡೆಯುತ್ತಿರುವ ಹೋರಾಟ ಭಕ್ತಿಯ ಹಾಗೂ ಮುಕ್ತಿಯ ಹೋರಾಟವಾಗಿ ಜನಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ದತ್ತಮಾಲಾ ಧಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಬೋರ್ಡ್ ಗಲಾಟೆ ರಾಜ್ಯದಲ್ಲಿ ನಡೆಯುತ್ತಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಬಲಿಪಶು ಆಗಿದ್ದು ದತ್ತಪೀಠ ಮತ್ತು ದತ್ತಾತ್ರೇಯ ದೇವರು ಎಂದು ಬೇಸರ ವ್ಯಕ್ತಪಡಿಸಿದರು.
೧೯೭೩-೭೪ರ ಗೆಜೆಟ್ ಮಾಡುವಾಗ ಮೂಲ ದಾಖಲೆಗಳನ್ನು ಪರಶೀಲಿಸದೆ ದತ್ತಾತ್ರೇಯ ಪೀಠವನ್ನು ವಕ್ಫ್ ಬೋರ್ಡ್ಗೆ ಸೇರಿಸಿ ಗೆಜೆಟ್ ನೋಟಿಫೀಕೇಶನ್ ಮಾಡಿದ್ದರ ಪರಿಣಾಮ ನಾವು ಅದನ್ನ ಉಳಿಸಿಕೊಳ್ಳಲು ಜನಾಂದೋಲನ ಮತ್ತು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಯಿತು ಎಂದರು.
ಜನಾAದೋಲನವೂ ಸಾಕಷ್ಟು ಪರಿಣಾಮ ಬೀರಿದೆ. ನ್ಯಾಯಾಂಗದ ಹೋರಾಟವು ಕೂಡ ನಮಗೆ ಅರ್ಧ ನ್ಯಾಯ ಕೊಟ್ಟಿದೆ. ಪೂರ್ಣ ನ್ಯಾಯಕ್ಕಾಗಿ ಹೋರಾಟವನ್ನು ಮುಂದುವರೆಸುತ್ತೇವೆ. ಭಕ್ತಿ ಮತ್ತು ಶಕ್ತಿಯ ಆಂದೋಲನ ದತ್ತಪೀಠದ ಮುಕ್ತಿಗಾಗಿ ಮುಂದುವರೆಸಲಾಗುವುದು ಎಂದು ಹೇಳಿದರು.
ಬಾಂಗ್ಲಾದೇಶದಲ್ಲಿ ಆಗುತ್ತಿರುವ ಬೆಳವಣಿಗೆ ಗಮನಿಸಿದಾಗ ಇಸ್ಲಾಂನ ಡಿಎನ್‌ಎ ಅನ್ನು ನಾವು ಅಂಗೈಗೆ ಕನ್ನಡಕ ಹೇಗೆ ಹಿಡಿಯಬೇಕಾಗಿಲ್ಲವೋ ಹಾಗೆಯೇ ಇಸ್ಲಾಂ ಹೆಸರಿನಲ್ಲಿ ನಡೆದ ಕ್ರೌರ್ಯ, ನರಮೇಧ, ಸಂಸ್ಕೃತಿ ನಾಶಕ್ಕೆ ನಾವು ಮತ್ತೆ ಮತ್ತೆ ಸಾಕ್ಷಿಯನ್ನು ಹುಡುಕಬೇಕಾದ ಅವಶ್ಯಕತೆ ಇಲ್ಲ. ಜಗತ್ತಿನ ಉದ್ದಗಲಕ್ಕೂ ಕ್ರೌರ್ಯ ಮತ್ತು ಮತಾಂಧತೆಯಿAದಲೇ ಮತದ ವಿಸ್ತರಣೆ ಮಾಡಿಕೊಂಡು ಬಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಅವರನ್ನ ಅವರದೇ ರೀತಿಯಲ್ಲಿ ಎದುರಿಸದೆ ಇದ್ದರೆ ಜಗತ್ತಿನ ಎಲ್ಲ ಸಂಸ್ಕೃತಿಗಳು ನಾಶವಾಗುತ್ತವೆ. ಸಾವಿರಾರು ವರ್ಷಗಳ ಪರಂಪರೆ ನಾಶವಾಗುತ್ತದೆ. ಭಾಷೆ ನಾಶವಾಗುತ್ತದೆ. ಹಾಗಾಗಿ ನಾಶವನ್ನು ತಡೆಯಲು ಇರುವ ಒಂದೇ ದಾರಿ ಅವರನ್ನು ಅವರದೆ ರೀತಿಯಲ್ಲಿ ಎದುರಿಸಬೇಕು ಎಂದು ಕರೆ ನೀಡಿದರು.
ಮುಸ್ಲಿಮರಿಂದ ಸಂಸ್ಕೃತಿ ನಾಶ ಮತ್ತು ಕಬಳಿಕೆ ನಿಲ್ಲುವಂತದ್ದು ಅಲ್ಲ ಎಂಬುದನ್ನು ಮಾನಗಂಡು ಅಂಬೇಡ್ಕರ್ ಅಂದೇ ವಿವರಣೆ ನೀಡಿದ್ದರು. ಎಲ್ಲ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳುಹಿಸಿ. ಅಲ್ಲಿನ ಹಿಂದುಗಳನ್ನು ಭಾರತಕ್ಕೆ ಕರೆ ತನ್ನಿ ಎಂಬ ಮಾತನ್ನು ಹೇಳಿದ್ದರು. ಅವರ ಮಾತು ಕೇಳದೆ ಇದ್ದ ಪರಿಣಾಮ ಇಂದು ಹಿಂದುಗಳು ನಿರಾಶ್ರಿತರವಾಗುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಸತ್ತಿಗೆ ಸವಾಲ್, ವಿಧಾನಸೌಧವೇ ನಮ್ಮದು ಎಂದು ಮುಸ್ಲಿಮರು ಹೇಳುತ್ತಿದ್ದಂತೆ ಇದೀಗ ನಮ್ಮ ದೇವಾಲಯ ಉಳಿಸಿಕೊಳ್ಳುವ ಪರಿಸ್ಥಿತಿ ನಮಗೆ ಬಂದಿದೆ. ಹಾಗಾಗಿ ಯಾವುದೇ ಜಾತಿಬೇಧಕ್ಕೆ ಅವಕಾಶ ನೀಡದೆ ಮೂಲತತ್ವಕ್ಕೆ ಬದ್ಧರಾಗಿ ನಾವೆಲ್ಲಾ ಒಂದಾಗಿರಬೇಕು ಎಂದರು.