ವಿಜಯಪುರ ಜಲನಗರದ ಸುಪ್ರಸಿದ್ಧ ಜೈ ಸಂತೋಷಿಮಾತಾ ದೇವಸ್ಥಾನದ ಜಾತ್ರಾ ಮಹೋತ್ಸವದ ಕಾರ್ಯಕ್ರಮ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಜಯಪುರ ಜಲನಗರದ ಸುಪ್ರಸಿದ್ಧ ಜೈ ಸಂತೋಷಿಮಾತಾ ದೇವಸ್ಥಾನದ ಜಾತ್ರಾ ಮಹೋತ್ಸವದ ಅಧ್ಯಕ್ಷ ಪ್ರೇಮಾನಂದ ಬಿರಾದಾರ ಮಾಹಿತಿ ನೀಡಿದರು. ಉಪಾಧ್ಯಕ್ಷ ಮಹಾದೇವಯ್ಯ ಗಚ್ಚಿನಮಠ, ಕರಿಬಸು ಅರಕೇರಿ. ಸುನೀಲ ಮುಂಡಾಸ, ಇದ್ದರು.  
ಜಿಲ್ಲೆ

ಆ.23ರಿಂದ ಜೈ ಸಂತೋಷಿಮಾತಾ ದೇವಸ್ಥಾನದ ಜಾತ್ರಾ ಮಹೋತ್ಸವ

ವಿಜಯಪುರ:ವಿಜಯಪುರ ಜಲನಗರದ ಸುಪ್ರಸಿದ್ಧ ಜೈ ಸಂತೋಷಿಮಾತಾ ದೇವಸ್ಥಾನದ ಜಾತ್ರಾ ಮಹೋತ್ಸವ ಆ.23ರಿಂದ 25ರವರೆಗೆ ವಿಜ್ರಂಭಣೆಯಿಂದ ನೇರವೇರಿಸಲು ನಿರ್ಧರಿಸಲಾಗಿದೆ ಎಂದು ಜೈ ಸಂತೋಷಿಮಾತಾ ಜಾತ್ರಾ ಮಹೋತ್ಸವ ಕಮೀಟಿ ಅಧ್ಯಕ್ಷ ಪ್ರೇಮಾನಂದ ಬಿರಾದಾರ ಹೇಳಿದರು.

ಮಂಗಳವಾರ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಕ್ಕೆ ಒಮ್ಮೆ ಈ ಜಾತ್ರೆ ನಡೆಯುವುದು ವಿಶೇಷವಾಗಿದೆ. ಈ ವರ್ಷ ನಡೆಯುವ ಜಾತ್ರೆಯಲ್ಲಿ ಆ. 23ರಂದು ಬುಧವಾರ ಸಂಜೆ 6ಗಂಟೆಗೆ ಜಾತ್ರಾ ಮಹೋತ್ಸವಕ್ಕೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಚಾಲನೆ ನೀಡಲಿದ್ದಾರೆ. ರಾತ್ರಿ 8 ಗಂಟೆಗೆ ಭಕ್ತಿ ಗೀತೆಗಳ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಆ.24ರಂದು ಗುರುವಾರ ಬೆಳಗ್ಗೆ 8ಗಂಟೆಗೆ ಬೃಹತ್ ಕುಂಭಮೇಳದ ಮೆರವಣಿಗೆ ನಡೆಯಲಿದೆ. ಕುಂಭಮೇಳಕ್ಕೆ ಬುರುಣಾಪುರದ ಸಿದ್ದಾಪುರ ಮಠದ ಮಾತಾ ಯೋಗೇಶ್ವರಿ, ಸಿದ್ದಸಿರಿ ಬ್ಯಾಂಕ್ ನಿರ್ದೇಶಕಿ ಶೈಲಜಾ ಬಸನಗೌಡ ಪಾಟೀಲ, ವಸುಂಧರಾ ಐನಾಪುರ, ಡಾ ಅಂಬಿಕಾ ಬಿರಾದಾರ, ಹಾಗೂ ಶಶಿಕಲಾ ಇಜೇರಿ ಚಾಲನೆ ನೀಡುವರು. ಕುಂಭಮೇಳದಲ್ಲಿ 1501 ಸುಮಂಗಲಿಯರು ಪೂರ್ಣ ಕುಂಭ ಹೊತ್ತು. ಐತಿಹಾಸಿಕ ತಾಜಬಾವಡಿಯಿಂದ ನಗರದ ಪ್ರಮುಖ ರಸ್ತೆಗಳಾದ ಶಿವಾಜಿ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ವೃತ್ತ ಮಾರ್ಗವಾಗಿ ಬಾಗಲಕೋಟೆ ಕ್ರಾಸ್‌ಗೆ ಬರಲಿದೆ. ಅಲ್ಲಿಂದ ಕೋರ್ಟ್ ಕ್ರಾಸ್ ಮುಖಾಂತರ ಜೈ ಸಂತೋಷಿ ಮಾತಾ ದೇವಸ್ಥಾನ ತಲುಪಲಿದೆ ಎಂದು ಹೇಳಿದರು.

ಸಂಜೆ 5ಗಂಟೆಗೆ ದೇವಸ್ಥಾನದಲ್ಲಿ ಹೋಮ ಹವನ ನಡೆಯಲಿದೆ. ರಾತ್ರಿ 7ಗಂಟೆಗೆ ನವರಸ ಪ್ರದರ್ಶಕ ಕಲೆಗಳ ಮಹಾವಿದ್ಯಾಲಯದ ನಿರ್ದೇಶಕ ರಂಗನಾಥ ಬತ್ತಾಸಿ ಹಾಗೂ ಅವರ ತಂಡದಿಂದ ಸಂಗೀತ, ನೃತ್ಯ ಕಾರ್ಯಕ್ರಮ ನಡೆಯಲಿದೆ. ಗಾಯಕಿ ಸಮೃದ್ಧಿ ಸಂತೋಷ ಮ್ಯಾಗೇರಿ ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾಳೆ ಎಂದರು.
ಆ.25ರಂದು ಶುಕ್ರವಾರ ಬೆಳಗ್ಗೆ 4ಗಂಟೆಗೆ 1501 ಸುಮಂಗಲಿಯರ ಮಹಾ ಕುಂಭಾಭೀಷಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 8ಗಂಟೆಗೆ ಕುಂಭಮೇಳದಲ್ಲಿ ಭಾಗವಹಿಸಿರುವ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1ಗಂಟೆಗೆ ಮಹಾ ಅನ್ನಪ್ರಸಾದ ನಡೆಯಲಿದೆ. ಸಂಜೆ 6ಗಂಟೆಗೆ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಯೋಜನಾ ನಿರ್ದೇಶಕ ವಿಜಯ ಮೆಕ್ಕಳಿಕ, ರವೀಂದ್ರ ಜಮ್ಮನಕಟ್ಟಿ, ಗುತ್ತಿಗೆದಾರ ಸಂತೋಷ ಗಾಣಗೇರ, ವಕೀಲ ಸಂಗನಗೌಡ ಪಾಟೀಲ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ದೇವಸ್ಥಾನ ಜಾತ್ರಾ ಕಮೀಟಿ ಉಪಾಧ್ಯಕ್ಷ ಮಹಾದೇವಯ್ಯ ಗಚ್ಚಿನಮಠ, ಸಂತೋಷ ತಳಕೇರಿ, ಚಂದ್ರು ಚೌಧರಿ, ಚಂದ್ರು ಅರಕೇರಿ ಇದ್ದರು.