ಬೀಳಗಿ ತಾಲೂಕಿನ ಅಮಲಝರಿ ಗ್ರಾಮದಲ್ಲಿ ಪಿಡಿಒಗೆ ಶಾಸಕ ಜೆ.ಟಿ.ಪಾಟೀಲ ಆವಾಜ್ ಹಾಕುತ್ತಿರುವುದು. 
ಜಿಲ್ಲೆ

ಇಡೀ ಊರು ಕರೆದು ನಿನ್ನ ಹೆಣ ಹೊರ್ತೆನೆ ಹುಷಾರ್ !

ಬಾಗಲಕೋಟೆ: ಜನೆವರಿ ೨೦ ರಂದು ಇಡೀ ಊರು ಕರೆದು ನಿನ್ನ ಹೆಣ ಹೊರ್ತೆನೆ ಹುಷಾರ್ ! ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಪಂ ಪಿಡಿಒ ಸಂಗಪ್ಪ ಎನ್ನುವವರಿಗೆ ಬುಧವಾರ ಹೀಗೆ ಆವಾಜ್ ಹಾಕಿದ್ದು ಬೀಳಗಿ ಶಾಸಕ ಜೆ.ಟಿ.ಪಾಟೀಲ.

ಬೀಳಗಿ ತಾಲೂಕಿನ ಅಮಲಝರಿ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಜೆ.ಟಿ.ಪಾಟೀಲ ಎದುರು ಗ್ರಾಮದ ಮಹಿಳೆಯರು ನರೇಗಾ ಸಂಬAಽಸಿದAತೆ ತಮ್ಮ ಅಳಲು ತೋಡಿಕೊಂಡರು. ಗ್ರಾಮದಲ್ಲಿ ಕೆಲಸ ಸಿಗುತ್ತಿಲ್ಲ. ಬಡವರು ಏನು ತಿನ್ನಬೇಕು? ಪಂಚಾಯಿತಿಯಿAದ ಕೆಲಸವನ್ನು ಕೊಡುತ್ತಿಲ್ಲ. ಸ್ವಲ್ಪ ನೀವಾದರೂ ಹೇಳಿ, ನಮಗೆ ಕೆಲಸಕ್ಕೆ ಹಚ್ಚಿರಿ ಎಂದು ದಯನೀಯವಾಗಿ ಬೇಡಿಕೊಂಡರು. ಹೀಗೆ ಸಾಲು ಸಾಲು ಮಹಿಳೆಯರು ಕೆಲಸ ಕೊಡಿಸಿ ಎಂದಿದ್ದಕ್ಕೆ ಪಿಡಿಒ ಮೇಲೆ ಶಾಸಕರು ಗರಂ ಆದರು.

ಪಿಡಿಒ ಅವರನ್ನು ಕರೆದು ನೀನು ಸಸ್ಪೆಂಡ್ ಆಗಬೇಕು ಅಂತಿಯಾ? ಇಲ್ಲಿ ಏನು ಮಾಡುತ್ತಿ ಕೆಲಸ? ನಾಚಿಕೆ ಬರಬೇಕು ನಿಮಗೆ. ೨೦ನೇ ತಾರೀಖಿಗೆ ಊರು ಕರೆದು ನಿನ್ನ ಹೆಣ ಹೊರ್ತೆನೆ. ಇಷ್ಟು ಜನ ಮಹಿಳೆಯರು ಬಾಯಿ ಬಿಟ್ಟು ಕೇಳುತ್ತಿದ್ದಾರೆ. ನಾಚಿಕೆ ಬರಲ್ಲ. ಇಲ್ಲಿ ಬರೀ ಪಗಾರ ತಗೊಂಡು ಕೂಡೋದು ಮಾಡುತ್ತೀಯಾ? ಜ. ೨೦ನೇ ತಾರೀಖಿನ ಒಳಗಾಗಿ ಅವರಿಗೆ ಕೂಲಿ ಕೆಲಸ ಮತ್ತು ಪಗಾರ ಕೊಡದೇ ಇದ್ದರೆ ಸಿಇಒಗೆ ಹೇಳಿ ನಿನ್ನ ಸಸ್ಪೆಂಡ್ ಮಾಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಹಾಗೆಯೇ ಬೀಳಗಿ ಕ್ಷೇತ್ರದ ಕೋಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ್ದ ಶಾಸಕರಿಗೆ, ಅಲ್ಲಿನ ಜನರು ಶಿಕ್ಷಕರ ಕೊರತೆ ನಡುವೆ ಮತ್ತೊಬ್ಬ ಶಿಕ್ಷಕನಿಗೆ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಕ್ಷೇತ್ರ ಶಿಕ್ಷಣಾಽಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ವರ್ಗಾವಣೆ ಆದವರ ಜಾಗಕ್ಕೆ ಇನ್ನೊಬ್ಬರು ಬರುವವರೆಗೂ ಅವರನ್ನು ಬಿಡುಗಡೆ ಮಾಡಿದ್ದೇಕೆ ಎಂದು ಬಿಇಒ ಆರ್.ಎಸ್.ಆದಾಪುರ ಅವರ ಮೇಲೆ ಸಿಡಿಮಿಡಿಗೊಂಡರು. ಶಿಕ್ಷಕರ ಬಗ್ಗೆ ಮಾಹಿತಿ ಕೇಳಿದಾಗ ಬಿಇಒ ಅವರು ಸರ್ ಆ ಶಿಕ್ಷಕರದ್ದು ಜನಿಯೂನ್ ಇತ್ತು ಎಂದರು. ಯಾ ಜನಿಯೂನ್ ಇರಲಿ, ಮತ್ತೊಬ್ಬರು ಬರುವವರೆಗೂ ಬಿಡುಗಡೆ ಮಾಡಬೇಡಿ ಎಂದು ಹೇಳಿದ್ದೇನಲ್ಲ. ನಿಮ್ಮ ಮೇಲೆ ಕ್ರಮ ಜರುಗಿಸಲು ಹೇಳುತ್ತೇನೆ. ಕೇಳ್ರೀ ಇಲ್ಲಿ, ಅವರು ಒಬ್ಬರೆ ಇರಲಿ, ಯಾರೇ ಇರಲಿ, ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಬಿಡುಗಡೆ ಮಾಡಬಾರದು ಎಂದು ಹೇಳಿದ್ದೇನೋ ಇಲ್ಲವೋ? ಈಗ ಇಲ್ಲಿ ಯಾರನ್ನು ಹಾಕುತ್ತೀರಿ? ಎಷ್ಟು ದಿನದಲ್ಲಿ ಹಾಕುತ್ತೀರಿ ಹೇಳಿ ಎಂದರು.

ಒ0ದು ವಾರದಲ್ಲಿ ವ್ಯವಸ್ಥೆ ಮಾಡುವೆ ಎಂದು ಬಿಇಒ ಹೇಳಿದಾಗ, ಒಬ್ಬರನ್ನು ಖಾಯಂ ಆಗಿ ಇಲ್ಲಿಗೆ ಹಾಕಿ ನೋಡೋಣ ಎಂದ ಅವರು, ಅತಿಥಿ ಶಿಕ್ಷಕರು ಇದ್ದಾರೆ ಎಂದು ಜನರು ಹೇಳಿದಾಗ, ನೋಡಿ, ಸರ್ಕಾರ ಶಿಕ್ಷಕರ ನೇಮಕಾತಿ ಮಾಡುವವರೆಗೂ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು. ಆ ಬಗ್ಗೆ ಬೇರೆ ಇಲ್ಲ ಎಂದು ಜನರಿಗೆ ತಿಳಿಸಿದರು. ಇನ್ನು ಶಾಲೆಯಲ್ಲಿ ಬಿಸಿಯೂಟದ ರುಚಿ ಬಗ್ಗೆ ಮಕ್ಕಳಿಂದ ಮಾಹಿತಿ ಪಡೆದುಕೊಂಡರು.