ಸರಗೂರು: ತಾಲೂಕಿನ ಇಟ್ನಾ ಗ್ರಾಮದಲ್ಲಿ ಮಂಗಳವಾರ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು.
ನದಿ ಮಧ್ಯ ಭಾಗದಲ್ಲಿರುವ ಜಪದಕಟ್ಟೆಯಲ್ಲಿ ಚಿಕ್ಕದೇವಮ್ಮನವರ ಉತ್ಸವ ಮೂರ್ತಿ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಸಮೀಪದಲ್ಲಿರುವ ಗೂಳಿ ಮಂಟಪದಲ್ಲಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಯಿತು. ನಂತರ ಇಟ್ನಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ವೀರಗಾಸೆ ಕುಣಿತ, ಪೂಜಾ ಕುಣಿತ ಮತ್ತಿತರ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ದೊಡ್ಡವೀರನಾಯಕ, ಇಟ್ನಾ ಗ್ರಾಪಂ ಅಧ್ಯಕ್ಷ ಜಯರಾಮ, ಉಪಾಧ್ಯಕ್ಷೆ ಗೌರಮ್ಮ ಚಿಕ್ಕಣ್ಣ, ಗ್ರಾಪಂ ಸದಸ್ಯ ಎನ್.ಬಸವನಾಯಕ, ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಸರಗೂರು ಶಿವಣ್ಣ, ಕಾಳಲಿಂಗನಾಯಕ, ನಾಗರಾಜು, ಬೆಟ್ಟನಾಯಕ, ಯಜಮಾನರು ಸೋಮಣ್ಣ, ಮಾಜಿ ಗ್ರಾಪಂ ಸದಸ್ಯ ಚಿಕ್ಕಣ್ಣ, ಬಸಪ್ಪ ತುಂಬಸೋಗೆ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಇಟ್ನಾ ರಾಜಣ್ಣ, ತಾಲೂಕು ಸಂಚಾಲಕ ಕೂಡಗಿ ಗೋವಿಂದರಾಜು, ನಾಗೇಂದ್ರ, ಅಣ್ಣಯ್ಯಸ್ವಾಮಿ ಮತ್ತಿತರರು ಹಾಜರಿದ್ದರು.