ಬಾಗಲಕೋಟೆ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಹಿಂದು ಜಾಗರಣ ವೇದಿಕೆ ಉತ್ತರ ಪ್ರಾಂತ ಮಾಮೃ ಸುರಕ್ಷ ಪ್ರಮುಖ ಶ್ರೀಕಾಂತ ಹೊಸಕೇರಿ, ಹಿಂದು ಜಾಗರಣ ವೇದಿಕೆ ಯುವವಾಹಿನಿ ಪ್ರಮುಖ ಕುಮಾರಸ್ವಾಮಿ ಹಿರೇಮಠ, ವಿಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಇತರರು ಇದ್ದರು. 
ಜಿಲ್ಲೆ

ಇಜ್ತೇಮಾಗೆ ಅವಕಾಶ ನೀಡಿರುವುದು ಸರಿಯಲ್ಲ

ಬಾಗಲಕೋಟೆ: ನವನಗರದಲ್ಲಿ ಸರ್ಕಾರಿ ಜಾಗೆಯಲ್ಲಿ ಮುಸ್ಮಿಮರಿಗೆ ಬಡೇ ಇಜ್ತೇಮಾ ಮಾಡಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿ ಬಿಟಿಡಿಎ ಅಽಕಾರಿಗಳ ವಿರುದ್ಧ ಹಿಂದೂ ಜಾಗರಣ ವೇದಿಕೆ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಕೊತ್ತಲೇಶ್ವರನ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತಕ್ಕೆ ತಲುಪಿ ಸಭೆಯಾಗಿ ಮಾರ್ಪಟ್ಟಿತು. ಪ್ರತಿಭಟನಾ ರ‍್ಯಾಲಿಯುದ್ದಕ್ಕೂ ಸಿಎಂ ಸಿದ್ದರಾಮಯ್ಯ, ಬಿಟಿಡಿಎ ಅಽÃಕಾರಿಗಳ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿದರು.
ಬಿಟಿಡಿಎ ಅಽಕಾರಿಗಳು ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಲು ಸತಾಯಿಸುತ್ತಾರೆ. ಆದರೆ, ಮುಸ್ಲಿಂ ಸಮುದಾಯದ ಬಡೇ ಇಜ್ತೇಮಾ ಕಾರ್ಯಕ್ರಮಕ್ಕೆ ಸರ್ಕಾರಿ ಜಮೀನು ನೀಡುವ ಜತೆಗೆ ವಾರಗಟ್ಟಲೆ ಅದನ್ನು ಸರಕಾರದ ಹಣದಿಂದಲೇ ಸ್ವಚ್ಛಗೊಳಿಸಿದ್ದಾರೆ. ಏಕೆ ಬಿಟಿಡಿಎ ಅಽಕಾರಿಗಳು ಮುಸ್ಲಿಮರಿಗೆ ತುಷ್ಟೀಕರಣ ಮಾಡುತ್ತಿದ್ದಾರೆ. ಮುಸ್ಲಿಮರು ಮಾಡುತ್ತಿರುವ ಕಾರ್ಯಕ್ರಮಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಸರ್ಕಾರ ಜಾಗೆ ನೀಡಿರುವುದು ಸರಿಯಲ್ಲ ಎಂದು ದೂರಿದರು.

ಹಿಂದು ಜಾಗರಣ ವೇದಿಕೆ ಉತ್ತರ ಪ್ರಾಂತ ಮಾಮೃ ಸುರಕ್ಷ ಪ್ರಮುಖ ಶ್ರೀಕಾಂತ ಹೊಸಕೇರಿ, ಹಿಂದು ಜಾಗರಣ ವೇದಿಕೆ ಯುವವಾಹಿನಿ ಪ್ರಮುಖ ಕುಮಾರಸ್ವಾಮಿ ಹಿರೇಮಠ, ವಿಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮುಖಂಡರಾದ ಸತ್ಯನಾರಾಯಣ ಹೇಮಾದ್ರಿ, ಕಿರಣ ಪವಾಡಶೆಟ್ಟರ, ವಿಕ್ರಂ ದೇಶಪಾಂಡೆ, ಈರಣ್ಣ ಲಾಯದಗುಂದಿ, ಜಯಂತಿ ಕುರಂದವಾಡ, ಶಶಿಕಲಾ ಸುರೇಶ ಮಜ್ಜಗಿ, ಮನೋಜ ಕರೋಡಿವಾಲ್, ಶ್ರೀನಾಥ ಸಜ್ಜನ ಇತರರಿದ್ದರು.