ಜಿಲ್ಲೆ

ಇಚ್ಛಾಶಕ್ತಿ ದೃಢವಿದ್ದರೆ ಯಶಸ್ವಿ ಕಲಾವಿದ

ಕಲಬುರಗಿ: ಕಲಾವಿದ, ನಟನಾಗುವ ಇಚ್ಛೆ ಇದ್ದರೆ ಮನೆಯವರನ್ನು, ಹಿರಿಯರನ್ನು ಒಪ್ಪಿಸುವ ಗುಣ ಬೆಳೆಸಿಕೊಳ್ಳಬೇಕು. ಗಾಯನ, ನೃತ್ಯ, ನಟನೆ ಪ್ರವೃತ್ತಿಗಳಾಗಿದ್ದು, ವೃತ್ತಿಯ ಜತೆಗೆ ಕಾಪಿಕೊಟ್ಟುಕೊಂಡು ಹೋಗಬೇಕು ಎಂದು ನಟ, ನಿರ್ದೇಶಕ ಮದನ ಪಟೇಲ್ ಹೇಳಿದರು.

ಗುಲ್ಬರ್ಗ ವಿವಿಯ ಜ್ಞಾನ ಗಂಗಾ ಆವರಣದದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಡೆಯಲಿರುವ ಮೂರು ದಿನದ ಅಂತರ ಮಹಾವಿದ್ಯಾಲಯ ಯುವಜನೋತ್ಸವಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿ, ಐದು ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸ ಹೊಂದಿರುವ ವೈಶಿಷ್ಟÈಮಯ, ವೈವಿಧ್ಯಮಯ ಸಂಸ್ಕೃತಿಗಳು ನಮ್ಮಲ್ಲಿವೆ. ಇದನ್ನು ಇಚ್ಛಾಶಕ್ತಿಯಿಂದ ಮುಂದುವರಿಸಿಕೊAಡು ಹೋಗಬೇಕು ಎಂದು ಹೇಳಿದರು.

ಡಾ.ರಾಜಕುಮಾರ ೪ನೇ ತರಗತಿ ಅಧ್ಯಯನ ಮಾಡಿದರೂ ನಟನೆಯಲ್ಲಿ ಮಹತ್ಸಾಧನೆ ಮಾಡಿದರು. ವಿದ್ಯೆಗಿಂತ ಇಚ್ಛಾಶಕ್ತಿ ದೊಡ್ಡದು. ಚೆನ್ನಾಗಿ ಅಧ್ಯಯನ ಮಾಡಿ, ಮನಸ್ಸಿನ ಭಾವನೆಗಳನ್ನು ಮನೆಯ ಹಿರಿಯರ ಒಪ್ಪಿಸಬೇಕು. ಆಗ ಮಾತ್ರ ಎತ್ತರಕ್ಕೆ ಬೆಳೆಯಲು ಸಾಧ್ಯ. ನಮ್ಮ ಜೀವನ ಮುಂದಿನ ಪೀಳಿಗೆಗೆ ಮಾದರಿ ಆಗಬೇಕು ಎಂದರು.

ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ ಮಾತನಾಡಿ, ಶಿಸ್ತು ಬದ್ಧತೆಯೊಂದಿಗೆ ಎಲ್ಲ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ನಿರ್ಣಾಯಕರ ತೀರ್ಪಿಗೆ ಬದ್ಧರಾಗಿ ಮುಂದಡಿ ಇಡಬೇಕು. ಯಶಸ್ವಿಯಾಗಿ ಯುವಜನೋತ್ಸವ ನಡೆಯಲಿ. ಇಲ್ಲಿ ವಿಜೇತರು ದಕ್ಷಿಣ ವಲಯ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.

ಸಿಂಡಿಕೇಟ್ ಸದಸ್ಯ ಮಲ್ಲಣ್ಣ ಮಡಿವಾಳ, ವಿದ್ಯವಿಷಯಕ ಪರಿಷತ್ ಸದಸ್ಯ ಪ್ರೊ.ಅಬ್ದುಲ್ ರಬ್ ಉಸ್ತಾದ್, ಕುಲಸಚಿವ ಪ್ರೊ.ರಾಜನಾಳ್ಕರ್ ಲಕ್ಷö್ಮಣ, ಮೌಲ್ಯಮಾಪನ ಕುಲಸಚಿವೆ ಡಾ.ಮೇಧಾವಿನಿ ಕಟ್ಟಿ, ವಿತ್ತಾಧಿಕಾರಿ ಗಾಯತ್ರಿ ಇತರರಿದ್ದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ರಮೇಶ ಲಂಡನಕರ್ ಸ್ವಾಗತಿಸಿದರು. ಡಾ.ಸುರೇಶ ಜಂಗೆ ವಂದಿಸಿದರು.