ಬೋರಗಾಂವ: ನೆರೆಯ ಮಹಾರಾಷ್ಟ್ರದ ಸುಳಕೂಡ ಗ್ರಾಮದ ಬಳಿ ದೂಧಗಂಗಾ ಬ್ಯಾರೇಜ್ನಿಂದ ನೇರವಾಗಿ ಪೈಪ್ಲೈನ್ ಮೂಲಕ ಇಚಲಕರಂಜಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಅನುಮೋದನೆ ನೀಡಿರುವುದನ್ನು ಖಂಡಿಸಿ ಚಿಕ್ಕೋಡಿ ತಾಲೂಕು ಕರವೇ ಟಕ ವತಿಯಿಂದ ಉಪ ತಹಸೀಲ್ದಾರ್ ಪಿ.ಬಿ.ಸಿರಿವಂತ ಮೂಲಕ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಮೀಪದ ಸದಲಗಾ ಪಟ್ಟಣದ ದೂಧಗಂಗಾ ಬ್ಯಾರೇಜ್ ಹತ್ತಿರ ಜಮಾಯಿಸಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯ ನಾಗೇಶ ಮಾಳಿ, ಸುಳಕೂಡ ಬ್ಯಾರೇಜ್ ನಮ್ಮ ಕರ್ನಾಟಕ ರಾಜ್ಯಕ್ಕೆ ನೀರು ಬಿಡುವ ಪ್ರಮುಖ ಟ್ಟವಾಗಿದೆ. ನೆರೆಯ ಇಚಲಕರಂಜಿ ನಗರಕ್ಕೆ ನೇರವಾಗಿ
ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಿದರೆ ನದಿ ತೀರದ ಸುಮಾರು 40 ಹಳ್ಳಿಗಳಿಗೆ ತೀವ್ರ ನೀರಿನ ಸಮಸ್ಯೆ ಉಂಟಾಗಲಿದೆ. ಕರ್ನಾಟಕ ಸೇರಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಸುಮಾರು 125 ಹಳ್ಳಿಗಳು ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ ಎಂದು ಹೇಳಿದರು.
ದೂಧಗಂಗಾ ನದಿಗೆ ಕಾಳಮ್ಮವಾಡಿ ಆಣೆಕಟ್ಟು ನಿರ್ಮಿಸುವ ಸಮಯದಲ್ಲಿ ಎರಡು ರಾಜ್ಯಗಳ ನಡುವೆ ನೀರು ಹಂಚಿಕೆ ಪ್ರಕಾರ 4 ಟಿಎಂಸಿ ನೀಡಲಾಗುತ್ತಿದೆ. ಸುಳಕೂಡ ಯೋಜನೆಯಿಂದ ಇಚಲಕರಂಜಿ ನಗರಕ್ಕೆ ನೀರು ಸರಬರಾಜು ಮಾಡಿದರೆ ಕರ್ನಾಟಕದ ಗಡಿ ಗ್ರಾಮಗಳಲ್ಲಿ ನೀರಿನ ಕೊರತೆಯಾಗಲಿದೆ. ಕರ್ನಾಟಕ ಸರ್ಕಾರವು ಈ ಯೋಜನೆ ತಡೆಹಿಡಿದು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಸದಸ್ಯ ರಾಜೇಂದ್ರ ಕುಂಬಾರ ಮಾತನಾಡಿ, ಯೋಜನೆಗೆ ಕರ್ನಾಟಕ ಸೇರಿ ಮಹಾರಾಷ್ಟ್ರ ರಾಜ್ಯದ ಜನತೆ ಕೂಡ ವಿರೋಧಿಸಿದ್ದಾರೆ. ಸಚಿವರು ಈ ಬಗ್ಗೆ ತಣ ರ್ನಿಣಯ ತಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಯುವ ಟಕ ಅಧ್ಯ ವಿಶಾಲ ಕುಡಚಿ, ಸದಲಗಾ ಅಧ್ಯ ಸಂಜು ಲಠ್ಠೆ, ಕಾರ್ಯದರ್ಶಿ
ಚನ್ನಪ್ಪ ಬಡಿಗೇರ, ರಾಜೆಂದ್ರ ಪಾಟೀಲ, ಹರ್ಷಿತಾ ರಾಯಮಾನೆ, ರಾಮಚಂದ್ರ ಹಂಡೆ, ಬಬನ ಜಾಮದಾರ, ವೈಭವ ಪಾಟೀಲ, ಭೀಮಾ ಚೌಗುಲೆ, ವಿಕಾಸ ನಿಡಗುಂದೆ, ಗುಂಡು ದೇಸಾಯಿ, ಅಮಿತ ಹಣಬರ ಇತರರಿದ್ದರು.