ಜಿಲ್ಲೆ

ಇಗ್ನೋ: ವಿವಿಧ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮೈಸೂರು: ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 2025ರ ಸಾಲಿನ ಪ್ರವೇಶ ಶುರುವಾಗಿದ್ದು, ಸ್ನಾತಕ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಸರ್ಟಿಫಿಕೆಟ್ ಕೋರ್ಸ್‌ಗಳ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಆಕಸ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿಯೂ ಇದೆ. ಪ್ರವೇಶ ಪರೀಕ್ಷೆ ಇಲ್ಲದೆಯೇ ವಿದ್ಯಾರ್ಥಿಗಳು ನೇರವಾಗಿ ಎಂಬಿಎಗೆ ಪ್ರವೇಶ ಪಡೆಯಬಹುದಾಗಿದೆ ಎಂದು ಇಗ್ನೋದ ಪ್ರಾದೇಶಿಕ ಉಪ ನಿರ್ದೇಶಕಿ ಡಾ.ಹೇಮಾ ಮಾಲಿನಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೋರ್ಸ್‌ಗಳ ಮಾಹಿತಿಗಾಗಿ https://ignouadmission.samarth.edu.in  ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ.

ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿರುವ ಕೇಂದ್ರವನ್ನು (0821- 2423374) ಇಲ್ಲವೇ ಖುದ್ದಾಗಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು. ಸಂಯೋಜಕರಾದ ಡಾ.ಬಿ.ಎಸ್.ಶ್ರೀಹರ್ಷ, ಡಾ.ಸಿದ್ದರಾಜು ಹಾಗೂ ರಮೇಶ್ ಇದ್ದರು.