ಜಿಲ್ಲೆ

ಇಗ್ನೋ ಪ್ರವೇಶ ಆರಂಭ

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾಲಯ (ಇಗ್ನೊ)ದ ದೂರ ಶಿಕ್ಷಣದ 2025ನೇ ಸಾಲಿನ ಕೋರ್ಸ್​ಗಳಿಗೆ ಪ್ರವೇಶ ಪ್ರಾರಂಭವಾಗಿದೆ ಪ್ರವೇಶಕ್ಕಾಗಿ ನಗರದ ಜೆಎಸ್​ಎಸ್​ ಕಾಲೇಜಿನಲ್ಲಿ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು.

ಜೆಎಸ್​ಎಸ್​ ಇಗ್ನೋ ಕೇಂದ್ರದಲ್ಲಿ ಎಂಎಸ್ಸಿ, ಎಂಬಿಎ, ಎಂಸಿಎ, ಎಂಕಾಂ, ಎಂಎ (ಇಂಗ್ಲಿಷ್​), ಎಂಎ (ಇತಿಹಾಸ), ಎಂಎ (ಅರ್ಥಶಾಸ್ತ್ರ), ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಟಿಎಸ್​, ಇತರ ಸ್ನಾತಕ ಕೋರ್ಸ್​ಗಳು, ಡಿಇಸಿಇ, ಡಿಟಿಎಸ್​, ಡಿಎನ್​ಎಚ್​ಇ ಡಿಪ್ಲೋಮಾ ಕೋರ್ಸ್​ಗಳು, ಪಿಜಿ ಡಿಪ್ಲೋಮಾ ಕೋರ್ಸ್​ಗಳು, ಪ್ರಮಾಣಪತ್ರ ಕೋರ್ಸ್​ಗಳು ಸಿಗಲಿವೆ. ಏಕಕಾಲಕ್ಕೆ ಎರಡು ಪದವಿಗಳನ್ನು ಪಡೆದುಕೊಳ್ಳಲು ಅವಕಾಶವಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಜೆಎಸ್​ಎಸ್​ ಅಧ್ಯಯನ ಕೇಂದ್ರ, ವಿದ್ಯಾಗಿರಿ, ಧಾರವಾಡ, ವಿಳಾಸಕ್ಕೆ ಸಂಪಕಿರ್ಸಬಹುದು ಎಂದು ಕೇಂದ್ರದ ಸಂಯೋಜಕ ಡಾ. ಸೂರಜ್​ ಜೈನ್​ ತಿಳಿಸಿದ್ದಾರೆ.