ಕಲಬುರಗಿ: ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಖಾತೆಗೆ ನಿಯಮಿತವಾಗಿ ಇಎಸ್‌ಐ, ಪಿಎಫ್ ಪಾವತಿ ಮಾಡದ ಹೊರ ಸಂಪನ್ಮೂಲ ಏಜೆನ್ಸಿಗಳನ್ನು ಮುಲಾಜಿಲ್ಲದೆ ಕಪ್ಪು ಪಟ್ಟಿಗೆ ಸೇರಿಸುವಂತೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಾಕೀತು ಮಾಡಿದರು.
ಡಿಸಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮ್ಯಾನುವೆಲ್ ಸ್ಕಾö್ಯವೆಂಜರ್ಸ್ ನೇಮಕಾತಿ ಪ್ರತಿಬಂಧಕ ಮತ್ತು ಪುನರ್‌ವಸತಿ ಅಧಿನಿಯಮ-೨೦೧೩ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೌರ ಸಂಸ್ಥೆಗಳು ಕಾರ್ಮಿಕರಿಗೆ ವೇತನ ಪಾವತಿ ಮಾಡುವುದಷ್ಟೇ ಅಲ್ಲ, ಕಾರ್ಮಿಕರ ಖಾತೆಗೆ ಏಜೆನ್ಸಿಗಳು ಇಎಸ್‌ಐ, ಪಿಎಫ್ ಪಾವತಿ ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಕಾರ್ಮಿಕರನ್ನು ಸ್ಕಾÈವೆಂಜರ್ ಕೆಲಸಕ್ಕೆ ಬಳಸುವಂತಿಲ್ಲ. ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರ ಬಳಸಬೇಕು. ಮ್ಯಾನ್‌ಹೋಲ್, ಒಳ ಚರಂಡಿ, ರೊಚ್ಚತೊಟ್ಟಿ ನಿರ್ಮಾಣ ಮತ್ತು ದುರಸ್ತಿ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ಕರ್ಮಚಾರಿಗಳಿಗೆ ಸುರಕ್ಷಾ ಪರಿಕರ ನೀಡಬೇಕು. ಮ್ಯಾನುವೆಲ್ ಸ್ಕಾÈವೆಂಜರ್‌ಗಳು ಇತರೆ ವೃತ್ತಿಯಲ್ಲಿ ತಮ್ಮ ಬದುಕು ಕಟ್ಟಿಕೊಳ್ಳಲು ಕೌಶಲ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದು ಸೂಚಿಸಿದರು.
ಜಿಪಂ ಸಿಇಒ ಭಂವರ್‌ಸಿAಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಡಿಸಿಪಿ ಅಡ್ಡೂರು ಶ್ರೀನಿವಾಸಲು, ಪಾಲಿಕೆ ಉಪ ಆಯುಕ್ತ ಪ್ರಕಾಶ ರಜಪುತ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಬೆಣ್ಣೂರ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಜಿಲ್ಲಾ ಸಮಿತಿ ಸದಸ್ಯ ಅನೀಲಕುಮಾರ್ ಇತರರು ಇದ್ದರು.