ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಜನರಿಗೆ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸಿರುವ ಇಆರ್‌ಎಸ್‌ಎಸ್ 112 ನಡಿ( ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ) 588 ಕರೆಗಳನ್ನು ಸ್ವೀಕರಿಸಿ, ತಕ್ಷಣ ಸ್ಪಂದಿಸಲಾಗಿದೆ.
ಕಳೆದ ಅಕ್ಟೋಬರ್‌ನಲ್ಲಿ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಕಷ್ಟದಲ್ಲಿರುವವರು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದಾಗ ತಕ್ಷಣ ತುರ್ತು ಸ್ಪಂದನ ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ, ಅಗತ್ಯ ನೆರವು ನೀಡುತ್ತಾರೆ. ಜಿಲ್ಲೆಯಲ್ಲಿ ತಾಲೂಕಿಗೊಂದರಂತೆ 7 ತುರ್ತು ಸ್ಪಂದನ ವಾಹನಗಳಿದ್ದು ಗಲಾಟೆ, ಅಪಘಾತ, ಅವಘಡ ಪ್ರಕರಣಗಳಲ್ಲಿ ಸಿಲುಕಿರುವವರನ್ನು ರಕ್ಷಿಸಲಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ 157, ನವೆಂಬರ್‌ನಲ್ಲಿ 289, ಡಿಸೆಂಬರ್ (ಡಿ.16ರವರೆಗೆ) 142 ಸೇರಿ 588 ಕರೆಗಳನ್ನು ಸ್ವೀಕರಿಸಲಾಗಿದೆ.
ಕರೆ ಮಾಡುವ ವಿಧಾನ : ನೇರವಾಗಿ 112 ಸಂಖ್ಯೆಗೆ ಕರೆ ಮಾಡಬಹುದು. ಇಲ್ಲವೇ ಸಾಮಾನ್ಯ ಫೋನ್‌ನಲ್ಲಿ 5 ಇಲ್ಲವೇ 9 ಸಂಖ್ಯೆಯನ್ನು ಧೀರ್ಘವಾಗಿ ಒತ್ತುವುದು, ಸ್ಮಾರ್ಟ್ ಫೋನ್‌ಗಳಲ್ಲಿ 3 ಇಲ್ಲವೇ 5 ಬಾರಿ ಪವರ್ ಬಟನ್ ಅನ್ನು ವೇಗವಾಗಿ ಒತ್ತುವಿಕೆ, 112ಇಂಡಿಯಾ ಮೊಬೈಲ್ ಆ್ಯಪ್ ಮೂಲಕ, ವೆಬ್ ಸೈಟ್ ಡಿಡಿಡಿ.ಓ.್ಞಛ್ಟಿ.ಜ್ಞಿ, ಇಮೇಲ್ ಛ್ಟಿ112ಠಿಃ.ಜಟ.ಜ್ಞಿ ಗೆ ಸಂದೇಶ ಕಳುಹಿಸಬಹುದು.
ಸ್ಯಾಂಪಲ್ ಪ್ರಕರಣಗಳು : ಶಿಡ್ಲಘಟ್ಟ ಬೈಪಾಸ್ ರಸ್ತೆಯ ಬಳಿರುವ ್ರೆಂಡ್ಸ್ ಗ್ಯಾರೇಜ್ ಬಳಿ ಪ್ರಜ್ಞೆ ಇಲ್ಲದೇ ಮಲಗಿದ್ದ ವೃದ್ಧೆ ಮರಿಯಮ್ಮಳನ್ನು ಗೊರಗಮಡುಗು ಬಳಿ ಇರುವ ಜೀವನ ಜ್ಯೋತಿ ವೃದ್ಧಾಶ್ರಮಕ್ಕೆ ಸೇರಿಸಲಾಯಿತು. ಬೋದಗೂರು ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿಛ್ಛ ಅಜ್ಜಿಯನ್ನು ತುರ್ತು ಸ್ಪಂದನ ವಾಹನವು ಸಾರ್ವಜನಿಕರ ನೆರವಿನೊಂದಿಗೆ ರಕ್ಷಿಸಲಾಯಿತು. ಜತೆಗೆ ವಿವಿಧ ಹಳ್ಳಿಗಳಲ್ಲಿ ಕೌಟುಂಬಿಕ ಕಲಹ ಮತ್ತು ಕುಡಿತದ ಜಗಳದ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯು ತಿಳಿಸಿದೆ.