ಜಿಲ್ಲೆ

ಇಂಧನ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ:ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಹಾಸನ: ಇಂಧನ ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮುಂದಾಗಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದರು.
ನಗರದ ಸಂತೆ ಪೇಟೆ ಕಾರಾಗೃಹದ ಎದುರು ಇರುವ ಎಚ್. ಪಿ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್)ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾಸ್ ಸಂಪರ್ಕದಲ್ಲಿ ಜಪಾನ್ ದೇಶ ಮುಂಚೂಣಿಯಲ್ಲಿದೆ, ಅಲ್ಲದೆ ಅವರು ಇತರ ದೇಶಗಳಲ್ಲೂ ಅದನ್ನು ವಿಸ್ತರಿಸುವ ಸಲುವಾಗಿ ಭಾರತ ವಿವಿಧ ಕಡೆಯಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಇಂಧನ ವಲಯದಲ್ಲಿ ಪರಿಸರಕ್ಕೆ ಪೂರಕವಾದ ಸಿಎನ್‌ಜಿ ಬಳಕೆ ಹಾಗೂ ಅಳವಡಿಕೆಯಲ್ಲಿ ಹಾಸನದ ಜನರೂ ಉತ್ಸುಕರಾಗಿದ್ದು, ಸಿಎನ್‌ಜಿ ಅಳವಡಿಸಿಕೊಳ್ಳಲು ಇಚ್ಚಿಸುವವರಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ಸಾಕಷ್ಟು ಅನುಕೂಲಗಳಿವೆ ಅವುಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು
ಅತೀ ಶೀಘ್ರದಲ್ಲಿ ಹಾಸನದಲ್ಲಿ ಮನೆ ಮನೆಗೆ ಸಿಎನ್‌ಜಿ ಸಂಪರ್ಕ ನೀಡಲು ಯೋಜಿಸಲಾಗಿದೆ ಜೊತೆಗೆ ಸುಮಾರು 100 ಡಿಜಿಟಲ್ ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಇಂಧನಾ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ಅಭಿಲೇಶ್ ಗುಪ್ತಾ, ಎ.ಜಿ.ಪಿ. ಸಿಇಒ. ಪ್ರಥಮ್, ಒಸಾಕಾ ಗ್ಯಾಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಅತ್ಸುನೋರಿ ಅಕಾಸೋಬೆ, ಎಚ್.ಪಿ.ಸಿ.ಎಲ್. ಕಾರ್ಯನಿರ್ವಾಹಕ ನಿರ್ದೇಶಕ ಅನುಜ್ ಜೈನ್, ಜನರಲ್ ಮ್ಯಾನೇಜರ್ ತಕೇಶಿ ಶಿನೋಹರ, ಸಾಗರ್ ಸೇರಿದಂತೆ ಇತರರು ಇದ್ದರು.