ಕೆರೂರ : ಜಿಲ್ಲಾ 12ನೇ ಸಾಹಿತ್ಯ ಸಮ್ಮೇಳನದ ಐದು ಪುಸ್ತಕಗಳ ವಿತರಣಾ ಸಮಾರಂಭವು ಸೆ. 13 ರಂದು ಸಂಜೆ 4 ಗಂಟೆಗೆ ನಿರಬೂದಿಹಾಳ ಗ್ರಾಮದ ಕೆಪಿಎಸ್ ಶಾಲಾ ಆವರಣದಲ್ಲಿ ನಡೆಯಲಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಾಗಲಕೋಟೆ ಹಾಗೂ ಗ.ರಾ. ಗೋರಯ್ಯನವರ ಪ್ರತಿಷ್ಠಾನ ನಿರಬೂದಿಹಾಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಸಮಾರಂಭ ಅಧ್ಯತೆ ಶಾಸಕ ಜೆ.ಟಿ. ಪಾಟೀಲ ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಗುರು ಗೌರವ ಪ್ರಶಸ್ತಿ ಪ್ರದಾನವು ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಿಂದ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.