Today the Exhibition of Vijaya Sindoora Artifacts 
ಜಿಲ್ಲೆ

ಇಂದು ದಿ. ವಿಜಯ ಸಿಂಧೂರ ಕಲಾಕೃತಿಗಳ ಪ್ರದರ್ಶನ

ವಿಜಯಪುರ : ನಗರದ ಸ್ಟೇಶನ್​ ರಸ್ತೆಯ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್​ ಗ್ಯಾಲರಿಯಲ್ಲಿ ಅ. 6 ರಂದು ಬೆಳಗ್ಗೆ 10 ಕ್ಕೆ ಚಿತ್ರನಮನ ಕಲಾ ಶಿಬಿರ ಹಾಗೂ ದಿ. ವಿಜಯ ಸಿಂಧೂರ ಅವರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.

ಕ್ಯಾನವಾಸ್​ ಆರ್ಟ್​ ಫೌಂಡೇಷನ್​ ಹಾಗೂ ಸಿದ್ದಲಿಂಗ ಫೈನ್​ ಆರ್ಟ್​ ಸೊಸೈಟಿಯ ಸಂಯುಕ್ತಾಶ್ರಯದಲ್ಲಿ ಪ್ರದರ್ಶನ ಆಯೋಜಿಸಲಾಗಿದ್ದು, ರಾಜ್ಯ ಮಹಿಳಾ ವಿವಿಯ ಪ್ರಾಧ್ಯಾಪಕ ಡಾ. ವಿಷ್ಣು ಶಿಂದೆ ಕಾರ್ಯಕ್ರಮ ಉದ್ಘಾಟಿಸುವರು.

ನಂತರ ನಡೆಯುವ ರಾಜ್ಯಮಟ್ಟದ ಶಿಬಿರದಲ್ಲಿ 20 ಜನ ಕಲಾವಿದರು ಕಲಾಕೃತಿಗಳನ್ನು ರಚಿಸಿ ದಿ. ವಿಜಯ ಸಿಂಧೂರ ಅವರಿಗೆ ಕಲಾಕೃತಿಗಳ ಮೂಲಕ ಗೌರವ ನಮನ ಸಲ್ಲಿಸುವರು.

ಸಂಜೆ 4 ಕ್ಕೆ ಸಮಾರೋಪ ಸಮಾರಂಭ ಮತ್ತು ನುಡಿನಮನ ಕಾರ್ಯಕ್ರಮ ಜರುಗಲಿದ್ದು, ಕಲಾ ಪೋಷಕ ವಿಶ್ವನಾಧ ಬೀಳಗಿ, ಬೆಂಗಳೂರಿನ ಬಾಲಾಜಿ ಫ್ರೇಮ್​ ಮುಖ್ಯಸ್ಥ ಪ್ರಶಾಂತ ಹೆಗಡೆ, ಜಮಖಂಡಿಯ ರಾಜು ಸಿಂಧೂರ, ಸೋಮನಾಥ ಸಿಂಧೂರ, ಪಿ.ಎಸ್​. ಕಡೇಮನಿ, ವಿದ್ಯಾಧರ ಸಾಲಿ, ರಮೇಶ ಚವಾಣ, ಲಿಂಗರಾಜ ಕಾಚಾಪೂರ ಮತ್ತಿತರ ಕಲಾವಿದರು ಭಾಗವಹಿಸುವರು ಎಂದು ಕ್ಯಾನವಾಸ್​ ಆರ್ಟ್​ ಫೌಂಡೇಷನ್​ ಕಾರ್ಯದರ್ಶಿ ರಮೇಶ ಚವಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.