ಬಳ್ಳಾರಿ : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ವಿಚಾರಿಸಲು ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಗುರುವಾರ ಐಟಿ ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದರು.
ರೇಣುಕಸ್ವಾಮಿ ಕೊಲೆಯಾದ ಬಳಿಕ ಶವ ಸಾಗಿಸಲು ಹಾಗೂ ಕೊಲೆ ಎಸಗಿ ಜೈಲು ಸೇರಲು ಆರೋಪಿಗಳಿಗೆ ನಟ ದರ್ಶನ್ ನಗದು ರೂಪದಲ್ಲಿ ಹಣ ನೀಡಿದ್ದರು. ಇದರ ಅನ್ವಯ ಈಗಾಗಲೇ ಐಟಿಯಿಂದ ನೋಟಿಸ್ ನೀಡಲಾಗಿತ್ತು. ಈ ವಿಚಾರಣೆ ನಡೆಸಲು ಐಟಿ ಅಧಿಕಾರಿಗಳ ತಂಡ ಗುರುವಾರ ಜೈಲಿಗೆ ಭೇಟಿ ನೀಡಲು ಜೈಲು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ್ದು, ದರ್ಶನ್ ಭೇಟಿಗೆ ಅನುಮತಿ ನೀಡಲಾಗಿದೆ.
ಐಟಿ ಅಧಿಕಾರಿಗಳ ವಿಚಾರಣೆ ನಡೆಸುವ ಉದ್ದೇಶದಿಂದ, ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ಹಿರಿಯ ವಕೀಲ ರಾಮಸಿಂದ್ ಬುಧವಾರ ದರ್ಶನ್ ಭೇಟಿ ಮಾಡಿ ಐಟಿ ಅಧಿಕಾರಿಗಳಿಗೆ ಯಾವ ಉತ್ತರ ನೀಡಬೇಕು ಎಂಬ ಮಾಹಿತಿ ನೀಡಿದ್ದಾರೆ ಎಂದು ಅಪ್ತ ಮೂಲಗಳು ತಿಳಿಸಿದವು.