ಜಿಲ್ಲೆ

8ರಂದು ಡಾ. ಕೋರೆಗೆ ಅಭಿನಂದನಾ ಸಮಾರಂಭ

ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿ 40 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಇಲ್ಲಿನ ನೆಹರು ನಗರದ ಕನ್ನಡ ಭವನದಲ್ಲಿ ಜೂ.8ರಂದು ಬೆಳಗ್ಗೆ 10.30 ಗಂಟೆಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಕೆಎಲ್‌ಇ ಸಂಸ್ಥೆಯ ನಿವೃತ್ತ ಆಜೀವ ಸದಸ್ಯರು, ಪ್ರಾಚಾರ್ಯರು, ಪ್ರಾಧ್ಯಾಪಕರು, ಅಧ್ಯಾಪಕರು, ಇತರ ಸಿಬ್ಬಂದಿ ಹಾಗೂ ಸಂಘ-ಸಂಸ್ಥೆಗಳು, ಕನ್ನಡ ಭವನ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ನಿರ್ದೇಶಕರ ಆಯೋಜಿಸಿರುವ ಸಮಾರಂಭದ ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಡಾ.ಸಿ.ಎಂ.ತ್ಯಾಗರಾಜ ವಹಿಸುವರು. ಮುಖ್ಯ ಅತಿಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಜಿ.ಹಿರೇಮಠ ಭಾಗವಹಿಸಲಿದ್ದಾರೆ.

ಎಲ್‌ಇಯುಎಸ್‌ಎಂ ಮೆಡಿಕಲ್ ಪ್ರೋಗ್ರಾಮ್ ನಿರ್ದೇಶಕ ಎಚ್.ಬಿ.ರಾಜಶೇಖರ, ಬೆಳಗಾವಿ ಸ್ಪೋರ್ಟ್ಸ್ ಅಧ್ಯಕ್ಷ ಅವಿನಾಶ ಪೋತದಾರ, ಸಾಹಿತಿ ಡಾ.ಬಸವರಾಜ ಜಗಜಂಪಿ, ಡಾ.ವಿ.ಎಸ್.ಮಾಳಿ, ಪ್ರೊ. ವಿ.ಬಿ. ಹಿರೇಮಠ, ಡಾ.ಗುರುದೇವ ಹುಲೆಪ್ಪನವರಮಠ, ಬೆಳಗಾವಿ ಇಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷ ಎಸ್.ವೈ. ಕುಂದರಗಿ ಅವರು ಅಭಿನಂದನೆ ನುಡಿಗಳನ್ನು ಹೇಳುವರು. ಪ್ರೊ.ಬಿ.ಎಸ್.ಗವಿಮಠ, ಡಾ.ಎಫ್.ವಿ. ಮಾನ್ವಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.