ಜಿಲ್ಲೆ

ಇಂದು ಚೆಸ್ ಅಸೋಸಿಯೇಷನ್ ಸಭೆ

ಬಳ್ಳಾರಿ : ಇಲ್ಲಿನ ಪೋಲಾ ಹೊಟೇಲ್‌ನಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ನೇಮಕ ಸೆ. 28 (ಶನಿವಾರ)ದಂದು ನಡೆಸಲಾಗುವುದು ಎಂದು ಅಸೋಷಿಯೇಷನ್ ಅಧ್ಯಕ್ಷ ಡಾ. ಬಿ. ಎಚ್. ಎಂ. ವಿರುಪಾಕ್ಷಯ್ಯ ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲೆಯ ಚೆಸ್ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗುವುದು. ಚೆಸ್ ಕ್ಲಬ್‌ಗೆ ಸಂಬಂಧಿಸಿದಂತೆ ಸಭೆಯಲ್ಲಿ ಹಾಜರಾಗಿ ಸಲಹೆ ಸೂಚನೆಗಳನ್ನು ನೀಡಬಹುದು. ಅಲ್ಲದೆ ಜಿಲ್ಲೆಯ ಎಲ್ಲ ಚೆಸ್ ಕ್ಲಬ್‌ಗಳು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಅಂತಹವರಿಗೆ ಮಾತ್ರ ಸಂಘಟನೆಯ ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.