ಬಳ್ಳಾರಿ : ಗ್ರಾಮೀಣ ಜೆಸ್ಕಾಂನ ಅಲ್ಲೀಪುರ ಸ್ವೀಕರಣ ಕೇಂದ್ರದ 20 ಎಮ್ವಿಎ ಪರಿವರ್ತಕ-2ರ ಆಯಿಲ್ ಸೋರಿಕೆಯ ತಡೆಗಟ್ಟುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಅಲ್ಲೀಪುರ ಸ್ವೀಕರಣ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ವಿವಿಧ ಮಾರ್ಗಗಳಲ್ಲಿ ಸೆ.24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ವಿದ್ಯುತ್ ವ್ಯತ್ಯಯ ಪ್ರದೇಶಗಳು: ಕೊಳ್ಳಗಲ್ಲು, ಕೃಷ್ಣನಗರ ಕ್ಯಾಂಪ್, ಎಫ್-32 ಐ.ಪಿ ಸೆಟ್ ಫೀಡರ್ ಮಾರ್ಗದ ಬೆಳಗಲ್ಲು, ಬೆಳಗಲ್ಲು ತಾಂಡ, ಜಾನೆಕುಂಟೆ, ಜಾನೆಕುಂಟೆ ತಾಂಡ, ಹರಗಿನದೋಣಿ, ಅಲ್ಲೀಪುರ, ಆಲದಹಳ್ಳಿ, ಹೊನ್ನಾಳ್ಳಿ, ಹೊನ್ನಳ್ಳಿ ತಾಂಡ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.