Oplus_131072 
ಜಿಲ್ಲೆ

ಇಂದಿನಿಂದ ಹೆಡೆತಲೆ ಶ್ರೀ ಆದಿಶಕ್ತಿ ಭಂಗಿ ಮಾರಮ್ಮನ ಜಾತ್ರೆ

ನಂಜನಗೂಡು: ತಾಲೂಕಿನ ಹೆಡತಲೆ ಗ್ರಾಮದ ಶ್ರೀ ಆದಿಶಕ್ತಿ ಭಂಗೀಮಾರಮ್ಮನವರ ಜಾತ್ರೆ ಮಾ.19ರಿಂದ 21ರವರೆಗೆ ನಡೆಯಲಿದ್ದು ಭರದ ಸಿದ್ಧತೆ ನಡೆದಿದೆ.

19ರಂದು ಬೆಳಗ್ಗೆ 7 ಗಂಟೆಗೆ ಆದಿಶಕ್ತಿ ಭಂಗಿ ಮಾರಮ್ಮನವರಿಗೆ ಮಹಾಮಂಗಳಾರತಿ ನಡೆಯಲಿದೆ. ಸಂಜೆ 4 ಗಂಟೆಗೆ ಮಡೆ ಉತ್ಸವ, ರಾತ್ರಿ ಒಂದು ಗಂಟೆಗೆ ಮಹಿಳೆಯರು ಮತ್ತು ಪುರುಷರು ಬಾಯಿ ಬೀಗ ಹಾಕಿಸಿಕೊಳ್ಳುವ ಕಾರ್ಯಕ್ರಮ, ರಾತ್ರಿ 2 ಗಂಟೆಗೆ ಹೆಮ್ಮಡೆ ಉತ್ಸವ. ಬೆಳಗಿನ ಜಾವ 4 ಗಂಟೆಗೆ ಈಡಿಗರ ತಪ್ಪು ನಡೆಯುತ್ತದೆ.

20 ರಂದು ಪ್ರಮುಖ ಬೀದಿಗಳಲ್ಲಿ ವೀರ ಮಕ್ಕಳ ಕುಣಿತ, ಕಡ್ಡಿ ವರಸೆ, ಗಾರುಡಿ ಗೊಂಬೆ ಕುಣಿತ, ತಮಟೆ ವಾದ್ಯ, ಕಂಸಾಳೆ ತಂಡಗಳ ಪ್ರದರ್ಶನವಿದೆ. ರಾತ್ರಿ 9 ಗಂಟೆಗೆ ಅಣ್ಣನ ಅರಮನೆ ಅಥವಾ ಕರ್ನಾಟಕ ಹುಲಿ ಸಾಮಾಜಿಕ ನಾಟಕ ಪ್ರದರ್ಶನವಿದೆ. 21ರಂದು ಸಂಜೆ 4 ಗಂಟೆಗೆ ಆದಿಶಕ್ತಿ ಭಂಗಿ ಮಾರಮ್ಮ ದೇವಿಯ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.