ಬೈಲಹೊಂಗಲ: ಪಟ್ಟಣದ ಎಂಜಿ ಹೌಸಿಂಗ್ ಕಾಲನಿ ಉದ್ಭವ ಚನ್ನಬಸವೇಶ್ವರ ದೇವರ ಜಾತ್ರೋತ್ಸವ ಹಾಗೂ ನೂತನ ರಥೋತ್ಸವ ಆ.28ರಿಂದ ಸೆ.2ರ ವರೆಗೆ ಜರುಗಲಿದೆ.
28ರಂದು ಸಂಜೆ 7 ಗಂಟೆಗೆ ನಡೆಯುವ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವನ್ನು ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ವಹಿಸುವರು. ದೈಹಿಕ ಶಿಣ ನಿರ್ದೇಶಕ ಬಸವರಾಜ ಹರ್ಲಾಪುರ ಅಧ್ಯತೆ ವಹಿಸುವರು. ಮುರಗೆಪ್ಪ ಗುಂಡ್ಲೂರ, ಶ್ರೀಕಾಂತ ಪತ್ತಾರ, ತುಕಾರಾಮ ಹೊಂಗಲ, ಶಿವಪುತ್ರ ತಲ್ಲೂರ ಆಗಮಿಸುವರು. 29 ರಂದು ಮರ್ಚಂಟ್ ಬ್ಯಾಂಕ್ ಅಧ್ಯ ಬಸವರಾಜ ಮೂಗಿ ಅಧ್ಯಕ್ಷತೆ ವಹಿಸುವರು. ಶಿಕ ಅಜಿತ ಮುಂಜಿ ಉಪನ್ಯಾಸ ನೀಡುವರು. 31ರಂದು ಸಂಜೆ ಮಲ್ಲವ್ವ ಅಂಗಡಿ ಅಧ್ಯತೆ ವಹಿಸುವರು. ಶರಣೆ ಪ್ರೇಮಾ ಅಂಗಡಿ ಉಪನ್ಯಾಸ ನೀಡುವರು. 1ರಂದು ಸಂಜೆ 7ಕ್ಕೆ ಪ್ರೊ.ವೀರಭದ್ರಪ್ಪ ಕೌದಿ ಅವರ ಪುಸ್ತಕಗಳ ಲೋಕಾರ್ಪಣೆ ಜರುಗುವುದು. ಕಸಾಪ ಜಿಲ್ಲಾಧ್ಯೆ ಮಂಗಳಾ ಮೆಟಗುಡ್ಡ ಅಧ್ಯತೆ ವಹಿಸುವರು. ಡಾ.ಎ್.ಡಿ.ಗಡ್ಡಿಗೌಡರ, ವೈ.ಎಂ.ಯಾಕೊಳ್ಳಿ ಉಪನ್ಯಾಸ ನೀಡುವರು. 2ರಂದು ಬೆಳಗ್ಗೆ 11ಗಂಟೆಗೆ ನೂತನ ರಥದ ಪೂಜೆ ಜರುಗುವುದು. ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಸದ ಜಗದೀಶ ಶೆಟ್ಟರ, ಸಚಿವೆ ಲಕ್ಷಿ$್ಮ ಹೆಬ್ಬಾಳ್ಕರ್ ಇತರರಿಗೆ ಸನ್ಮಾನ ಜರುಗುವುದು. ಸಂಜೆ 4.30ಕ್ಕೆ ರಥೋತ್ಸವ ಜರುಗಲಿದೆ.