ಚಿತ್ರದುರ್ಗ: ಕುಡಿಯುವ ನೀರು ಸರಬರಾಜಾಗುವ ಶಾಂತಿಸಾಗರದ ಕೊಟ್ಟಿಗೆಹಳ್ಳಿ ಪಂಪ್‌ಹೌಸ್‌ನಿಂದ ಚಿತ್ರದುರ್ಗದವರೆಗಿನ ಮಾರ್ಗ ಮಧ್ಯೆ ಮುಖ್ಯ ಕೊಳವೆಯಲ್ಲಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ ಫೆ. 12ರಿಂದ 14ರವರೆಗೆ ಶಾಂತಿಸಾಗರ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿನ ಕೊಳವೆಬಾವಿಗಳ ನೀರನ್ನು ಮತ್ತು ಶುದ್ಧ ಕುಡುಯುವ ನೀರನ್ನು ಉಪಯೋಗಿಸಬೇಕು. ಮಿತವಾಗಿ ನೀರು ಬಳಸಿ ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ಪೌರಾಯುಕ್ತೆ ಎಂ.ರೇಣುಕಾ ಕೋರಿದ್ದಾರೆ.