ಬೆಳಗಾವಿ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯುವ ಪ್ರಭಾಗ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ಶನಿವಾರ ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಜಿಲ್ಲೆ

ಇಂದಿನ ಯುವಕರಿಗೆ ಮೌಲ್ಯ ಶಿಕ್ಷಣ ನೀಡುವುದು ಅಗತ್ಯ

ಬೆಳಗಾವಿ: ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಯುವ ಪ್ರಭಾಗ ಹಾಗೂ ಕನಕದಾಸ ಶಿಕ್ಷಣ ಸಮಿತಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಿಕ್ಷಣ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ ಶನಿವಾರ ಅಂತರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಯುವಕರಿಗೆ ಮೌಲ್ಯ ಶಿಕ್ಷಣ ಎಂಬ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ, ಬ್ರಹ್ಮಕುಮಾರಿ ಅಶ್ವಿನಿ ಅಕ್ಕನವರು ಮಾತನಾಡುತ್ತಾ ಯುವಕರು ಜೀವನದಲ್ಲಿ ಯಶಸ್ವಿಯಾಗಲು ಮೊಟ್ಟ ಮೊದಲು ತಮ್ಮಯೊಳಗಿನ ನಕಾರಾತ್ಮಕ ವಿಚಾರಗಳನ್ನು ತಗೆದು ಹಾಕಿ ಸದಾ ಸಕಾರಾತ್ಮ ವಿಚಾರದಲ್ಲಿ ಇರಬೇಕು ಹಾಗೂ ಹೆದರಿಕೆಯನ್ನು ತೆಗೆದು ಹಾಕಿ ಧೈರ್ಯದಿಂದ ಮುನ್ನಡೆಯಬೇಕು. ‘ಧೈರ್ಯಂ ಸವತ್ರ ಸಾಧನಂ’ ಎಂಬಂತೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಧೈರ್ಯದಿಂದ ಮುಂದುವರೆಯಬೇಕು ಎಂದರು. ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಜಿನೇಶ್ವರ ಪಡನದ ಮಾತನಾಡಿ, ಯುವಕರು ಸದೃಢರಾಗಬೇಕಾದರೆ ದುಶ್ಚಟಗಳಿಂದ ದೂರ ಇರಬೇಕು, ಒಳ್ಳೆಯ ಹವ್ಯಾಸಗಳನ್ನು ರೂಡಿಸಕೊಳ್ಳಬೇಕು ಜೀವನದಲ್ಲಿ ಮುಂದೆ ಸ್ಪಷ್ಟ ಗುರಿ ಇರಬೇಕು ಹಿಂದೆ ಗುರು ಇರಬೇಕು, ಯುವ ಜನರಲ್ಲಿ ವಿಶೇಷವಾಗಿ ತಂದೆ ತಾಯಿಗಳಿಗೆ ಗುರು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು, ರಾಷ್ಟ್ರ ಪ್ರೇಮ ಮತ್ತು ಅಧ್ಯಾತ್ಮಿಕ ಬಗ್ಗೆ ಒಲವು ರೂಢಿಸಿಕೊಳ್ಳಬೇಕು ಎಂದರು. ಬ್ರಹ್ಮಾಕುಮಾರಿಸ್ ಯುವ ವಿಭಾಗದ ಸಂಯೋಜಕ ಬಿ.ಕೆ ಶ್ರೀಕಾಂತ ಯುವ ವಿಭಾಗದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಜಿ ಧಾರವಾಡ ವಹಿಸಿದ್ದರು.
ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಕೇವಲ ಭಾರತದಲ್ಲಿ ಅಷ್ಟೇ ಆಚರಿಸಲಾಗುತ್ತಿತ್ತು. ಭಾರತದಲ್ಲಿನ ಯೋಗದ ಶಕ್ತಿ ಮತ್ತು ಅಧ್ಯಾತ್ಮಿಕ ಜ್ಞಾನವನ್ನು ಕಂಡ ವಿಶ್ವಸಂಸ್ಥೆಯವರು ಅಗಷ್ಟ 12, 2000ನೇ ಇಸ್ವಿಯಿಂದ ಅಂತರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಗುತ್ತಿದೆ. ಭಾರತ ಅಧ್ಯಾತ್ಮ ತಳ ಹದಿಯ ಮೇಲೆ ನಿಂತಿದೆ. ಅಧ್ಯಾತ್ಮ ಅನ್ನುವುದು ಕೇವಲ ವಯಸ್ಸ ಆದವರಿಗೆ ಅಷ್ಟೇ ಅಲ್ಲ ಇದು ಪ್ರತಿಯೊಬ್ಬರಿಗೂ ಅವಶ್ಯಕವಾಗಿ ಬೇಕಾಗಿದೆ. ಈ ನಿಟ್ಟಿನಲ್ಲಿ ಈಶ್ವರೀಯ ವಿಶ್ವವಿದ್ಯಾಲಯ ಮಾಡುತ್ತಿರುವ ನಿಸ್ವಾರ್ಥ ಸೇವೆಯ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರತಿಕ್ಷಾ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಿವಲೀಲಾ ಅಂತರಾಷ್ಟ್ರೀಯ ಯುವ ದಿನಾಚರಣೆಯ ಬಗ್ಗೆ ಮಾತನಾಡಿದರು. ಬಿ.ಕೆ. ಯೋಗೇಶ ಈಶ್ವರೀ ವಿಶ್ವವಿದ್ಯಾಲಯದ ಪರಿಚಯ ನೀಡಿದರು. ಬಿ.ಕೆ ಮಲ್ಲೇಶ ಯುವ ಜಾಗೃತೆ ಗೀತೆ ಹಾಡಿದರು ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ. ಎಸ್. ನರಸಗೌಡ ರವರು ಪ್ರಾದ್ಯಪಕರಾದ ಡಾ. ಎನ್.ಎ. ಪೂಜಾರಿ ಅವರು ಬಿ.ಕೆ. ದೀಪಾ, ಬಿ.ಕೆ. ಅನುಷಾ ಹಾಗೂ ಕಾಲೇಜಿನ ಎಲ್ಲ ಪ್ರಾಧ್ಯಾಪಕರು ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು. ಕುಮಾರಿ ಅಲಕಾ ಸ್ವಾಗತಿಸಿದರು, ಅರ್ಜುನ ಗುರವ ಕಾರ್ಯಕ್ರಮ ನಿರೂಪಿಸಿದರು, ಚಿದಾನಂದ ಸುನದಾಳ ವಂದಿಸಿದರು.