ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಐ.ಎಸ್.ಯತೀಶ್ ಮತ್ತು ಉಪಾಧ್ಯಕ್ಷರಾಗಿ ಐ.ಸಿ.ಗುರುಸಿz್ದÉÃಗೌಡ ಅವಿರೋಧವಾಗಿ ಆಯ್ಕೆಯಾಗಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಹ ಸದಸ್ಯರು ಅಭಿನಂದಿಸಿದರು. ಟಿ.ರಾಜಶೇಖರ್, ಬೀಕನಹಳ್ಳಿ ಸೋಮಶೇಖರ್, ಮುಗುಳವಳ್ಳಿ ನಿರಂಜನ್, ಗಜೇಂದ್ರ, ಪ್ರೇಮ್ ಕುಮಾರ್ ಮತ್ತಿತರರಿದ್ದರು. 
ಜಿಲ್ಲೆ

ಇಂದಾವರ ಸಹಕಾರ ಸಂಘಕ್ಕೆ ಯತೀಶ್ ಅಧ್ಯಕ್ಷ, ಗುರುಸಿz್ದೆÃಗೌಡ ಉಪಾಧ್ಯಕ್ಷ

ಚಿಕ್ಕಮಗಳೂರು: ತಾಲೂಕಿನ ಇಂದಾವರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಐ.ಎಸ್.ಯತೀಶ್ ಮತ್ತು ಉಪಾಧ್ಯಕ್ಷರಾಗಿ ಐ.ಸಿ.ಗುರುಸಿz್ದÉÃಗೌಡ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಈ ವೇಳೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಗ್ರಾಮಸ್ಥರನ್ನು ಒಗ್ಗೂಡಿಸಿಕೊಂಡು ಎಲ್ಲರ ಕೆಲಸಗಳನ್ನು ಮಾಡುವುದು ಅಧ್ಯಕ್ಷರ ದೊಡ್ಡ ಜವಾಬ್ದಾರಿ. ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.

ಗ್ರಾಮದ ಅಭಿವೃದ್ಧಿಗಾಗಿ ಹಿರಿಯರು ಸಂಘವನ್ನು ಸ್ಥಾಪಿಸಿದ್ದು ಜೊತೆಗೆ ಸರ್ಕಾರವು ಪ್ರಾಮುಖ್ಯತೆ ನೀಡಿರುವ ಕಾರಣ ನೂತನ ಆಡಳಿತ ಮಂಡಳಿ ರಾಜಕೀಯ ಬೆರೆಸದೇ, ಪಕ್ಷಾತೀತವಾಗಿ ಸೊಸೈಟಿಯ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.

ನಿರ್ದೇಶಕರು, ಗ್ರಾಮಸ್ಥರ ಸಹಕಾರದಿಂದ ಅತ್ಯುತ್ತಮ ಕೆಲಸ ಕಾರ್ಯಗಳನ್ನು ಕೈಗೊಂಡು ಮುನ್ನೆಡೆ ಸಾಧಿಸಿ, ಇಡೀ ಜಿಲ್ಲೆಯಲ್ಲಿ ಉತ್ತಮ ಹೆಸರು ಗಳಿಸಬೇಕು. ಸೊಸೈಟಿಯ ಹಿಂದಿನ ಘಟನೆಗಳಿಗೆ ಮಣೆಹಾಕದೇ ಸಹಕಾರ ಸಂಘದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಸಹಕಾರ ಸಂಘದ ನೂತನ ಅಧ್ಯಕ್ಷ ಐ.ಸಿ.ಯತೀಶ್ ಮಾತನಾಡಿ, ಇಂದಾವರ ಸೊಸೈಟಿ ಪುರಾತನ ಹಿನ್ನೆಲೆ ಹೊಂದಿರುವ ಸಂಘವಾಗಿದೆ. ಗ್ರಾಮಸ್ಥರ ಏಳಿಗೆಗೆ ಹಿರಿಯರು ಸಂಘವನ್ನು ಸ್ಥಾಪಿಸಿ ಅಭಿವೃದ್ದಿಗೆ ಮುಡಿಪಿಟ್ಟಿದ್ದು, ಆ ಹಾದಿಯಲ್ಲೇ ನೂತನ ಆಡಳಿತ ಮಂಡಳಿಯು ಕಾರ್ಯನಿರ್ವಹಿಸಿ ಎಲ್ಲಿಯೂ ಕಪ್ಪುಚುಕ್ಕೆ ಬರದಂತೆ ಕೆಲಸ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಐ.ಆರ್.ಗಜೇಂದ್ರ, ಐ.ಪಿ.ಪ್ರೇಮ್‌ಕುಮಾರ್, ಐ.ಎಂ. ಮಂಜುನಾಥ್, ಐ.ಜೆ.ಮಲ್ಲೇಗೌಡ, ಐ.ಆರ್.ಕೆಂಚಯ್ಯ, ಐ.ಆರ್.ಮಂಜುನಾಥ್, ಐ.ಎಂ.ಸೋಮಶೇಖರ್, ಸಿ.ಎಂ. ವನಜಾಕ್ಷಿ, ನೀಲಾ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪವನ್‌ಕುಮಾರ್, ಮುಖಂಡರಾದ ಬೀಕನಹಳ್ಳಿ ಸೋಮ ಶೇಖರ್, ಮುಗುಳುವಳ್ಳಿ ನಿರಂಜನ್, ಎಚ್.ಕೆ.ಕೇಶವಮೂರ್ತಿ, ಗ್ರಾಮಸ್ಥರಾದ ಸುರೇಶ್, ಸುಭಾಶ್, ದಿನೇಶ್, ರಾಜು, ರವಿ, ಲವಕುಮಾರ್, ರಿರ್ಟನಿಂಗ್ ಅಧಿಕಾರಿ ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು.