ಕೊಕಟನೂರ: ಗಡಿಭಾಗದ ಖಿಳೇಗಾಂವ ಗ್ರಾಮದ ಅಂಕಿತ ಸದಾಶಿವ ಶಿವಾಗೋಳ ಎಂಬ ಪುಟ್ಟ ಬಾಲಕ ತನ್ನ ಅಪ್ರತಿಮ ಜ್ಞಾನದ ಮೂಲಕ ಇಂಡಿಯಾ ಬುಕ್ ಆಪ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿದ್ದಾನೆ.
1 ವರ್ಷ 11 ತಿಂಗಳ ವಯಸ್ಸಿನ ಅಂಕಿತ ಶರೀರದ 13 ಭಾಗ, 43 ಗೃಹೋಪಯೋಗಿ ವಸ್ತು, 5 ಸಸ್ಯ, 12 ಪ್ರಾಣಿ, 6 ಪಕ್ಷಿಗಳನ್ನು ಗುರುತಿಸುತ್ತಾನೆ. ಅಲ್ಲದೆ, 20 ಬಗೆಯ ವಾಹನ, 6 ರೀತಿ ತರಕಾರಿ, 10 ಪ್ರಸಿದ್ಧ ವ್ಯಕ್ತಿ, 15 ಬಗೆಯ ಆಹಾರ ಪದಾರ್ಥಗಳನ್ನು ಗುರುತಿಸುವ ಬುದ್ಧಿಮತ್ತೆ ಹೊಂದಿದ್ದಾನೆ. ಆನ್‌ಲೈನ್ ವಿಡಿಯೋ ಮೂಲಕ ತನ್ನೊಳಗೆ ಅಡಗಿದ್ದ ಸುಪ್ತ ಪ್ರತಿಭೆ ಹೊರಹಾಕಿದ್ದ ಅಂಕಿತ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದ್ದಾನೆ. ತಂದೆ ಸದಾಶಿವ ಶಿವಾಗೋಳ ಸೈನಿಕನಾಗಿದ್ದು, ತಾಯಿ ಸಾವಿತ್ರಿ ಗೃಹಿಣಿಯಾಗಿದ್ದಾರೆ. ಮಗುವಿನ ಸಾಧನೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.