ಇಂಡಿ ಪಟ್ಟಣದಲ್ಲಿ ಹಿಂದು ಪರ ಸಂಘಟನೆ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅಯೋಧ್ಯೆ ಮಂತ್ರಾಕ್ಷತೆ ವಿತರಿಸಿದರು. ನೇತಾಜಿ ಪವಾರ, ಭಗತಸಿಂಗ್ ಹಲವಾಯಿ, ಪ್ರವೀಣ ಮಠ, ಮಲ್ಲಿಕಾರ್ಜುನ ಹಾವಿನಾಳಮಠ ಇತರರಿದ್ದರು. 
ಜಿಲ್ಲೆ

ಇಂಡಿ ಪಟ್ಟಣದಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ

ಇಂಡಿ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಹಿಂದು ಪರ ಸಂಘಟನೆ ಕಾರ್ಯಕರ್ತರು ಮಂಗಳವಾರ ಪಟ್ಟಣದ ಮನೆ ಮನೆಗೆ ತೆರಳಿ ಅಯೋಧ್ಯೆ ಮಂತ್ರಾಕ್ಷತೆ ವಿತರಿಸಿದರು.

ಉದ್ಘಾಟನೆ ಕಾರ್ಯಕ್ರಮದಲ್ಲಿ ದೇಶದ 5 ಸಾವಿರ ಶ್ರೀಗಳು ಭಾಗವಹಿಸಲಿದ್ದು, ರಾಜ್ಯದ ಪ್ರತಿಯೊಂದು ಜಿಲ್ಲೆಗೊಬ್ಬ ಶ್ರೀಗಳಿಗೆ ಜ. 22 ರಂದು ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಟ್ರಸ್ಟ್ ಪರ ವಿಶ್ವ ಹಿಂದು ಪರಿಷತ್ತಿನ ಪ್ರಕಾಶ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಿದರು.

ನೇತಾಜಿ ಪವಾರ, ಭಗತಸಿಂಗ್ ಹಲವಾಯಿ, ಪ್ರವೀಣ ಮಠ, ಮಲ್ಲಿಕಾರ್ಜುನ ಹಾವಿನಾಳಮಠ, ಸೋಮು ನಿಂಬರಗಿಮಠ, ರಾಮಚಂದ್ರ ಕನ್ನೊಳ್ಳಿ ಹಾಗೂ ಹಿಂದು ಕಾರ್ಯಕರ್ತರು ಇದ್ದರು.