ಚಿಕ್ಕೋಡಿ: ಸಿವಿಲ್ ಇಂಜಿನಿಯರ್‌ಗಳಿಗೆ ಹಲವಾರು ಸಾಫ್ಟವೇರ್‌ಗಳ ಸಾಮಾನ್ಯ ಜ್ಞಾನ ಅವಶ್ಯ ಎಂದು ಬೆಂಗಳೂರು ಪ್ರೊಪ್ರಿಯೆಟರ್ ಸಾಯಿ ಕ್ಯಾಡ್ ಎಂ. ಮಂಜುನಾಥ ರೆಡ್ಡಿ ಹೇಳಿದರು.
ಇಲ್ಲಿನ ಕೆಎಲ್‌ಇ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಮೂರು ದಿನಗಳ ಕಾಲ ಸಾಯಿಕ್ಯಾಡ್ ಬೆಂಗಳೂರು ಸಹಭಾಗಿತ್ವದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಸ್ಕೆಚಪ್ ಸಾಫ್ಟವೇರ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ, ಸಂಯೋಜಕ ವಿನಯ ಮನಗೂಳೆ ಪ್ರಾಸ್ತಾವಿಕ ಮಾತನಾಡಿದರು.
ಸಿವಿಲ್ ವಿಭಾಗದ ನಾಲ್ಕನೆಯ ಹಾಗೂ ಆರನೆಯ ಸೆಮಿಸ್ಟರ್‌ನ ೬೪ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶೈಕ್ಷಣಿಕ ಸಂಯೋಜಕರಾದ ಕುಮಾರ ಚೌಗಲಾ, ಡಾ. ಲಕ್ಷ್ಮಣ ಅಂಬಿ, ಸುಶೀಲಕುಮಾರ ಭಗಾಟೆ, ಶಂಕರಗೌಡ ಪಾಟೀಲ, ಪೂಜಾ ಹೆಗಾಜೆ, ವಿವೇಕ ಪಾಟೀಲ, ಬಾಳಪ್ಪ ನವಲಾಯಿ, ವಿದ್ಯಾ ಅಂಗಡಿ, ರಂಜನಿ ಚವಾಣ, ಸಚಿನ ವಾಳಕಿ, ಮೇಘಶ್ರೀ ವಾಲಿ, ಪ್ರಸಾದ ಗುಜ್ಜರ, ಅರುಣಕುಮಾರ, ಸಂಕೇತ ಬಿ. ಇತರರಿದ್ದರು. ತೇಜಸ್ವಿನಿ ಪಾಟೀಲ, ಮರಿಯುಮ ಪಠಾಣ ನಿರೂಪಿಸಿದರು. ವಿಭಾಗ ಮುಖ್ಯಸ್ಥ ಪ್ರದೀಪ ಹೊದ್ಲೂರ ವಂದಿಸಿದರು.