ಕೊಪ್ಪಳ:ಎಲ್ಲರಲ್ಲೂ ಇಂಗ್ಲೀಷ್ ಭಾಷೆ ಕಠಿಣ ಎಂಬ ಭಾವನೆ ಇದೆ. ಆದರೆ, ಒಂದಿಷ್ಟು ಪ್ರಯತ್ನಿಸಿದರೆ ಸುಲಭವಾಗಿ ಮಾತನಾಡಲು ಹಾಗೂ ಬರೆಯಲು ಕಲಿಯಬಹುದು ಎಂದು ಬೂದಗುಂಪಾ ಸಹಿಪ್ರಾ ಶಾಲೆ ಮುಖ್ಯ ಶಿಕ್ಷಕ ರಾಮಣ್ಣ ಶ್ಯಾವಿ ಹೇಳಿದರು.
ತಾಲೂಕಿನ ಬೂದಗುಂಪಾದಲ್ಲಿ ಬುಧವಾರ ಕ್ಲಸ್ಟರ್ ಮಟ್ಟದ ಶಿಕ್ಷಕರಿಗೆ ಈಸಿ ಇಂಗ್ಲೀಷ್ ರೀಡಿಂಗ್ ಬುಕ್ ವಿತರಿಸಿ ಮಾತನಾಡಿದರು.
ಇಂಗ್ಲೀಷ ಧ್ವನಿ ಶಾಸ್ತ್ರದ ಪರಿಚಯ ತಿಳಿದುಕೊಂಡರೆ ಸುಲಭವಾಗಿ ಓದಬಹುದು. ಅಶೋಕ ಅಂಗಡಿ ಅವರು ಉಚಿತವಾಗಿ ಈ ಪುಸ್ತಕ ಕೊಡುಗೆಯಾಗಿ ನೀಡಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಆರಂಭಿಕ ಹಂತದಲ್ಲಿ ಇಂಗ್ಲೀಷ ಧ್ವನಿ ಶಾಸ್ತ್ರದ ಕುರಿತು ಪರಿಚಯಿಸಿ. ಇದರಿಂದ ಸುಲಭವಾಗಿ ಆಂಗ್ಲ ಭಾಷೆ ಕಲಿಕೆಗೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ಶಿಕ್ಷಕ ಪರಶುರಾಮ ಭಾವಿ ಮಾತನಾಡಿ, ಬಳಕೆ ಹೆಚ್ಚಾದಂತೆ ಭಾಷೆ ಸುಲಭವಾಗಲಿದೆ. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೆ ಇಂಗೀಷ್ ಮಾತನಾಡಲು ಯತ್ನಿಸಿ. ಇದರಿಂದ ಕಲಿಕೆ ಸುಗಮವಾಗಲಿದೆ ಎಂದರು.
ಪುಸ್ತಕ ದಾನಿ ಅಶೋಕ್ ಅಂಗಡಿಗೆ ಸನ್ಮಾನಿಸಲಾಯಿತು. ಸಿಆರ್‌ಪಿ ಸಂಜೀವ್ ಇಂಗೀಷ್ ಓದುವ ವಿಧಾನಗಳ ಬಗ್ಗೆ ವಿವರಿಸಿದರು. ಶಿಕ್ಷಕರಾದ ಎಚ್.ನಾಗರಾಜ, ಪ್ರಾಣೇಶ್, ಅಶೋಕ, ತಿಪ್ಪಣ್ಣ, ವಿರುಪಣ್ಣ, ನಿಂಗಪ್ಪ ಇತರರಿದ್ದರು.