ಜಿಲ್ಲೆ

ಇ-ರಕ್ತಕೋಶಕ್ಕೆ ಮಾಹಿತಿ,ಬ್ಲಡ್ ಸೆಂಟರ್ ಅಧಿಕಾರಿಗಳಿಗೆ ಎಚ್ಚರಿಕೆ

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂೆ ಅರ್ಭಟದ ಬೆನ್ನಲ್ಲೇ,ರಕ್ತ ಹಾಗೂ ಮತ್ತದರ ಅಂಗಾಂಶಗಳಿಗೆ,ಮುಖ್ಯವಾಗಿ ಪ್ಲೇಟ್‌ಲೇಟ್‌ಗೆ ಬೇಡಿಕೆ ಹೆಚ್ಚುತ್ತಿರುವ ಆತಂಕಕಾರಿ ಸನ್ನಿವೇಶದ ಈ ಸಂದರ್ಭದಲ್ಲಿ ರಾಜ್ಯದ ರಕ್ತ ಕೇಂದ್ರಗಳ ಪೈಕಿ ಹಲವು ಕೇಂದ್ರಗಳು,ತಮ್ಮಲ್ಲಿರುವ ರಕ್ತ ಸಂಗ್ರಹ ಣೆ ದಾಸ್ತಾನು ಮಾಹಿತಿಯನ್ನು ಉ್ಕಠಿಟಕೇಂದ್ರೀಕೃತ ರಕ್ತ ನಿರ್ವಹಣಾ ವ್ಯವಸ್ಥೆಗೆ ಸೂಕ್ತ ರೀತಿಯಲ್ಲಿ ತಿಳಿಸದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿದೆಯಂತೆ.
ರಾಜ್ಯದಲ್ಲಿರುವ ಸರ್ಕಾರಿ ಮತ್ತು ಖಾಸಗಿಗೆ ಸಂಬಂಧಿಸಿದ 260 ರಕ್ತ ನಿಧಿ ಕೇಂದ್ರಗಳು,ನಿತ್ಯ ತಮ್ಮಲ್ಲಿರುವ ರಕ್ತ,ಅದರ ಅಂಗಾಂಶ ಇ ತ್ಯಾದಿ ಮಾಹಿತಿಯನ್ನು ಇ-ರಕ್ತ ಕೋಶ ಸಾಫ್ಟ್‌ವೇರ್‌ಗೆ ಅಫ್‌ಲೋಡ್ ಮಾಡ ಬೇಕಿದೆ. ಇದರಿಂದ ಸಂಬಂಧಿಸಿದವರು ಈ ತಂತ್ರಾಂಶಕ್ಕೆ ಭೇಟಿ ನೀಡಿ ಸಮೀಪದ ಬ್ಲಡ್‌ಸೆಂಟರ್‌ಗಳಲ್ಲಿರುವ ರಕ್ತದ ಲಭ್ಯತೆ ಮಾಹಿತಿ ತಿಳಿಯಲು ಅನುಕೂಲವಾಗಲಿದೆ. ಇದಕ್ಕಾಗಿ ರೂಪಿಸಿರುವ ಏಕೈಕ ಇ-ರಕ್ತಕೋಶ ತಂತ್ರಾಂಶದಲ್ಲಿ ರಾಜ್ಯ,ಜಿಲ್ಲೆ,ಅಗತ್ಯ ರಕ್ತದ ಬೇಡಿಕೆ ಸೆಲೆಕ್ಟ್ ಮಾಡಿದರೆ ಲಭ್ಯತೆಯ ವಿವರ ಗೊತ್ತಾಗಲಿದೆ.
ಇಷ್ಟೊಂದು ಮಹತ್ವ ಪೂರ್ಣ ಮಾಹಿತಿ ಹಾಗೂ ತುರ್ತು ಸನ್ನಿವೇಶಕ್ಕೆ ಅತ್ಯಂತ ಉಪಯುಕ್ತವಾಗಿರುವ ತಂತ್ರಾಂಶಕ್ಕೆ ತಮ್ಮಲ್ಲಿರುವ ದಾ ಸ್ತಾನು ಮಾಹಿತಿಯನ್ನು ಅಫ್‌ಲೋಡ್ ಮಾಡದೆ ಹಲವು ಬ್ಲಡ್‌ಬ್ಯಾಂಕ್ ಅಧಿಕಾರಿ,ಸಿಬ್ಬಂದಿ ನಿರ್ಲಕ್ಷೃ ತೋರುತ್ತಿದ್ದಾರೆ ಎಂಬ ದೂರು ಹಿ ನ್ನೆಲೆಯಲ್ಲಿ ಬೆಂಗಳೂರಿನ ರಾಜ್ಯರಕ್ತ ಚಾಲನಾ ಪರಿಷತ್,ಎಲ್ಲ ಜಿಲ್ಲಾಧಿಕಾರಿ,ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತಿತರ ಸಂಬಂಧಿಸಿದ ಅಧಿ ಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ಡೆಂೆಗೆ ತುತ್ತಾಗುತ್ತಿರುವ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು,ಸಿಂಗಲ್‌ಡೋನರ್ ಹಾಗೂ ರ‌್ಯಾಂಡಮ್ ಡೋನರ್ ಪ್ಲೇಟ್‌ಲೆಟ್‌ಗಳು(ಎಸ್‌ಡಿಪಿ-ಆರ್‌ಡಿಪಿ)ಕೊರತೆಯಾಗದಂತೆ ನೋಡಿಕೊಳ್ಳುವ ಹೊಣೆ ಆರೋಗ್ಯ ಇ ಲಾಖೆ ಮೇಲಿದೆ.
ಮಾಹಿತಿ ಆಫ್‌ಲೋಡ್ ಮಾಡದೇ ಇರುವುದು ಎನ್‌ಬಿಟಿ/ಕೆಎಸ್‌ಬಿಟಿಸಿ ನಿಯಮಾವಗಳಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ನಿತ್ಯ ಸಂಜೆ 4.30ರೊಳಗೆ ಬ್ಲಡ್‌ಸೆಂಟರ್ ಅಧಿಕಾರಿ-ಸಿಬ್ಬಂದಿ ತಮ್ಮಲ್ಲಿರುವ ರಕ್ತದ ಲಭ್ಯತೆ ಮಾಹಿತಿಯನ್ನು ಆಫ್‌ಲೋಡ್ ಮಾಡಬೇಕಿದೆ. ಒ ಂದು ವೇಳೆ ರಕ್ತ,ಅಂಗಾಂಶಗಳು,ಪ್ಲೇಟ್‌ಲೆಟ್ ಕೊರತೆಯಿಂದ ಸಾವು-ನೋವಿನಂಥ ಅನಾಹುತಗಳಾದಲ್ಲಿ ಆ ಪ್ರದೇಶ ವ್ಯಾಪ್ತಿಯ ಬ್ಲಡ್ ಸೆಂಟರ್ ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆ ಮಾಡುವುದಾಗಿ ಪರಿಷತ್ ನಿರ್ದೇಶಕರು ಎಚ್ಚರಿಕೆ ಕೊಟ್ಟಿದ್ದಾರೆ.