ಹಾಸನ : ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಅರ್ಚನಾ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಅಚೇರಿಯಲ್ಲಿ ಬುಧವಾರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅನುಷ್ಠಾನಕ್ಕೆ ಇರುವ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯನ್ನು ನಡೆಸಿ ಮಾತನಾಡಿದ ಅವರು ಜನರಲ್ಲಿ ಹಾಗೂ ಸಿದ್ದ ಆಹಾರ ಉತ್ಪನ್ನ ಮಾರಾಟಗಾರರಿಗೆ ಹೆಚ್ಚಿನ ಅರಿವು ಮೂಡಿಸಿ ಎಂದು ಸೂಚನೆ ನೀಡಿದರು.ಬೀದಿ ಬದಿ ಮಾರಾಟಗಾರರು ಹಾಗೂ ಇತರ ಆಹಾರ ಪಾದಾರ್ಥ ವ್ಯಾಪಾರಿಗಳ ನೋಂದಣಿ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳಿಸಿ ಕೇವಲ ಪರವಾನಗಿ ನೀಡುವುದು, ನೊಂದಣಿ ಮಾಡುವ ಬಗ್ಗೆ ಮಾತ್ರ ಗಮನ ನೀಡದೆ ಮಾರಾಟಗಾರರು ಹಾಗೂ ಸಾರ್ವಜನಿಕರಿಗೆ ಆಹಾರ ಸುರಕ್ಷತೆ ಕಾಯಿದೆ, ಗುಣಮಟ್ಟ ಪರೀಕ್ಷೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿ ಎಂದರು.
ನಗರ ಸಭೆ ಹಾಗೂ ಗ್ರಾಮ ಪಂಚಾಯಿತಿಗಳು ವ್ಯಾಪಾರ ಪರವಾನಗಿ ನೀಡುವಾಗ ಆಹಾರ ಸುರಕ್ಷತೆ ಅಂಕಿತ ಅಧಿಕಾರಿಗಳ ಪರವಾನಗಿ ಮತ್ತು ನೋಂದಣಿ ಪತ್ರ ಕಡ್ಡಾಯಗೊಳಿಸಿ ಹಾಗೂ ಪಶುಗಳ ಆರೋಗ್ಯ ತಪಾಸಣೆ ನಡೆಸಿ ಎಂದರು.ಆಹಾರ ಸುರಕ್ಷತೆ ಅಂಕಿತ ಅಧಿಕಾರಿ ಡಾ. ಅನಿಲ್ ಧವನ್ ಮಾತನಾಡಿ, ಜಿಲ್ಲೆಯಲ್ಲಿ 3957 ವ್ಯಾಪಾರಸ್ಥರ ಗುರಿ ಇದ್ದು ಈಗಾಗಲೇ ಶೇ. 59 ರಷ್ಟು ಸಾಧನೆ ಮಾಡಲಾಗಿದೆ .ಎಲ್ಲಾ ಆಹಾರ ಪದಾರ್ಥ ಮಾರಾಟಗಾರರು ಸರಬರಾಜು ಕಡ್ಡಾಯವಾಗಿ ಪರವಾನಗಿ ಮಾಡಿಸಲೇ ಬೇಕಾಗಿದೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಂ.ಎಸ್.ಪಿ.ಟಿ.ಸಿ ಕೇಂದ್ರಗಳು,ಇಂದಿರಾ ಕ್ಯಾಂಟಿನ್ ಆಹಾರ ಪದಾರ್ಥಗಳ ಉಗ್ರಾಣಗಳು ಶೈತ್ಯಾಗಾರಗಳು, ಮಧ್ಯಾಹ್ನದ ಬಿಸಿಊಟ ಕೇಂದ್ರಗಳು, ಎ.ಪಿ ಎಂ.ಸಿ.ಗಳು ಸಹ ನೊಂದಣಿ ಮಾಡಬೇಕು .ಹಾಗೂ ಜಿಲ್ಲೆಯಲ್ಲಿ ಇರುವ ಎಲ್ಲಾ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳಲ್ಲಿ ಸುರಕ್ಷಾ ಮುಂಜಾಗ್ರತೆ ವಹಿಸಿಬೇಕಿದ್ದು ಎಲ್ಲದಕ್ಕೂ ಐ.ಎಸ್.ಐ ಮಾರ್ಕ್ ಇರುವುದು ಕಡ್ಡಾಯವಾಗಿದೆ ಎಂದು ಹೇಳಿದರು.
ಅಪರ ಪೋಲಿಸ್ ವರಿಷ್ಠಾಧಿಕಾರಿ ತಮ್ಮಯ್ಯ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಧನ್‌ಪಾಲ್, ಡಿ.ಎಚ್.ಓ ಡಾ. ಶಿವಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಆಹಾರ ಇಲಾಖೆ ಉಪ ನಿರ್ದೇಶಕ ಡಾ. ಸಂಜಯ್, ನಗರ ಸಭೆ ಆಯುಕ್ತ ಪರಮೇಶ್ವರಪ್ಪ ಹಾಗೂ ಇತರರು ಇದ್ದರು.